Skip to main content


ಗಾಂಧಿ ಅವತಾರ ತಾಳಿದ ರಾಜ್ ಬಿ ಶೆಟ್ಟಿ!!

'ಒಂದು ಮೊಟ್ಟೆಯ ಕಥೆ' ಸಿನಿಮಾ ನೋಡಿ ಎಲ್ಲರೂ 'ಏನ್ ಸಿನಿಮಾ ಮಾರಾಯಾ ಇದು ನಿಜಕ್ಕೂ ಸೂಪರ್..' ಎಂದು ಹಾಡಿ ಹೊಗಳಿದ್ದರು. ಈ ಚಿತ್ರದ ಮೂಲಕ ಪ್ರೇಕ್ಷಕರಿಗೆ ಹೊಸ ರುಚಿ ಮಾಡಿ ಬಡಿಸಿದ್ದ ರಾಜ್ ಬಿ ಶೆಟ್ಟಿ ಇದೀಗ ಸುಮಾರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅಮ್ಮಚ್ಚಿಯೆಂಬ ನೆನಪು, ತುರ್ತು ನಿರ್ಗಮನ, ಮಾಯಾಬಜಾರ್ ಸೇರಿದಂತೆ ಇದೀಗ 'ಫಿಕ್ಷನ್' ಚಿತ್ರ ಮಾಡುತ್ತಿದ್ದು, ಇದರಲ್ಲಿ ಗಾಂಧಿ ಅವತಾರ ತಾಳಿದ್ದಾರೆ.

ಹೌದು, ಹೌದು, ಮಣಿಪಾಲ್ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿರುವ ಕೆಲವು ವಿದ್ಯಾರ್ಥಿಗಳು 'ಫಿಕ್ಷನ್' ಶೀರ್ಷಿಕೆಯ ಚಿತ್ರ ಮಾಡುತ್ತಿದ್ದಾರೆ. ಅದರಲ್ಲಿ ರಾಜ್ ಬಿ. ಶೆಟ್ಟಿಗೆ ಗಾಂಧಿ ಹೆಸರಿನ ಪಾತ್ರ. 'ಈ ಚಿತ್ರದ ಹಿಂದೆ 20-21ರ ವಯೋಮಾನದ ಅನೇಕ ವಿದ್ಯಾರ್ಥಿಗಳಿದ್ದಾರೆ. ರಾಹುಲ್ ಮೆನನ್ ನಿರ್ದೇಶನ ಮಾಡುತ್ತಿದ್ದಾರೆ. ಇದೊಂದು ಡಾರ್ಕ್ ಸಿನಿಮಾ. ಮನುಷ್ಯನಲ್ಲಿರುವ ಕಪ್ಪು ಗುಣವನ್ನು ತೋರಿಸುವ ಪ್ರಯತ್ನ ಈ ಸಿನಿಮಾ ಮಾಡಲಿದೆಯಂತೆ. 'ಫಿಕ್ಷನ್'ನಲ್ಲಿ ಅವರಿಗೆ ಗಾಂಧಿ ಎಂದು ಕರೆಯುವುದೇಕೆ ಎಂಬುದೇ ತುಂಬ ಇಂಟರೆಸ್ಟಿಂಗ್ ವಿಚಾರವಂತೆ.   

short by Pawan / more at Balkani News


Comments