Skip to main content


ಹಾಲಿವುಡ್ ನಟರ ಸಂಭಾವನೆ ಎಷ್ಟು ಗೊತ್ತಾ ? ಕೇಳಿದರೆ ಶಾಕ್ ಆಗ್ತಿರಾ !

ಹಾಲಿವುಡ್ ನಲ್ಲಿ ಯಾರೆಲ್ಲಾ ಸ್ಟಾರ್ ಗಳು ಎಷ್ಟೆಲ್ಲಾ ಸಂಬಳ ಪಡೆದುಕೊಳ್ಳುತ್ತಾರೆ ಎಂಬ ಕುತೂಹಲಕಾರಿಯಾದ ಅಂಶ ಬೆಳಕಿಗೆ ಬಂದಿದೆ. ಇನ್ನೂ ಹೆಸರಿಡದ ಹಾಗೂ ಮುಂದಿನ ದಿನಗಳಲ್ಲಿ ತೆರೆ ಮೇಲೆ ಬರಲು ಸಿದ್ಧವಾಗುತ್ತಿರುವ ಬಾಂಡ್ ಚಿತ್ರಕ್ಕೆ ಡೇನಿಯಲ್ ಕ್ರೈಗ್ ಅವರಿಗೆ ನಿವ್ವಳ 22 ಮಿಲಿಯನ್ ಡಾಲರ್ ವೇತನವನ್ನು ನಿಗದಿ ಮಾಡಲಾಗಿದೆಯಂತೆ. ಜಗತ್ತಿನ ಇಡೀ ಚಿತ್ರರಂಗದ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದ ಡ್ವೇನ್ ಜಾನ್ಸನ್ ಅವರು 22 ಮಿಲಿಯನ್ ಡಾಲರ್ ವೇತನವನ್ನು ರೆಡ್ ನೋಟಿಸ್ ಗಾಗಿ ಪಡೆದುಕೊಂಡಿದ್ದರು. ಚಾರ್ಲಿಜ್ ಥರಾನ್ ನಟಿಸಿದ ತಮ್ಮ ಮುಂದಿನ ಚಿತ್ರಕ್ಕೆ ಪಡೆದ ವೇತನವನ್ನೂ ಮೀರಿಸದಂತೆ ಜಾನ್ಸನ್ ಮತ್ತು ಫಾಸ್ಟ್ ಅಂಡ್ ಫ್ಯೂರಿಯಸ್ 8 ಚಿತ್ರಕ್ಕೆ ಪಡೆದ ವೇತನಕ್ಕಿಂತಲೂ ಹೆಚ್ಚಾಗಿತ್ತು. ಫಾಸ್ಟ್ ಅಂಡ್ ಫ್ಯೂರಿಯಸ್ 8 ಚಿತ್ರಕ್ಕೆ ವಿನ್ ಡೀಸೆಲ್ 20 ಮಿಲಿಯನ್ ಡಾಲರ್ ಪಡೆದುಕೊಂಡಿದ್ದರು. 2020 ರವರೆಗೆ ಸುದೀರ್ಘ ವಿಳಂಬಗೊಂಡ ಬಾರ್ಬಿ ಚಿತ್ರಕ್ಕಾಗಿ ಅತ್ಯಧಿಕ ಸಂಭಾವನೆ ಪಡೆಯುವ ಪಟ್ಟಿಯಲ್ಲಿ ಅನ್ನಿ ಹ್ಯಾಥ್ಯೇ (15ಮಿ. ಡಾಲರ್) ಇದ್ದಾರೆ. ಈಕೆ ಜೊತೆ ಜೊತೆಗೆ ಜೆನ್ನಿಫರ್ ಲಾರೆನ್ಸ್ ರೆಡ್ ಸ್ಪಾರೋ ಚಿತ್ರಕ್ಕೆ ಅತ್ಯಧಿಕ ಸಂಭಾವನೆಯನ್ನು ಪಡೆದಿದ್ದರು.

ಹಾಲಿವುಡ್ ನಟರು ಪಡೆಯುವ ಸಂಭಾವನೆಯನ್ನು ಇಲ್ಲಿ ಪಟ್ಟಿ ಮಾಡಲಾಗಿದೆ:

ಡೇನಿಯಲ್ ಕ್ರೇಗ್: ಬಾಂಡ್ 25 (2019) 25 ಮಿ. ಡಾಲರ್
ಡ್ವೇನ್ ಜಾನ್ಸನ್: ರೆಡ್ ನೋಟಿಸ್ (2020) 22 ಮಿ. ಡಾಲರ್
ವಿನ್ ಡೀಸೆಲ್: ದಿ ಫಾಸ್ಟ್ ಅಂಡ್ ಫ್ಯೂರಿಯಸ್ (2017) 20 ಮಿ. ಡಾಲರ್
ಅನ್ನೆ ಹ್ಯಾಥ್ಯೇ: ಬಾರ್ಬಿ (2020) 15 ಮಿ, ಡಾಲರ್.      

short by Pawan / more at Balkani News

Comments