Skip to main content


ಇಷ್ಟು ಹಣ ನೀಡಿದ್ರೆ ಸನ್ನಿ ಜೊತೆ ಮಾಡಬಹುದು ಲಂಚ್

ಬಾಲಿವುಡ್ ಬೇಬಿ ಡಾಲ್ ಸನ್ನಿ ಲಿಯೋನ್ ಜೊತೆ ಅಭಿಮಾನಿಗಳಿಗೆ ಊಟ ಮಾಡುವ ಅವಕಾಶ ಸಿಗ್ತಿದೆ. ವಾಸ್ತವವಾಗಿ ಸನ್ನಿ ಲಿಯೋನ್ ನಟನೆ ಜೊತೆ ಚಾರಿಟಿ ಟ್ರಸ್ಟ್ ನಡೆಸುತ್ತಿದ್ದಾಳೆ. ಅಮೆರಿಕಾ ಕ್ಯಾನ್ಸರ್ ಸೊಸೈಟಿ ಹಾಗೂ ಪೇಟಾಗೆ ಸಹಾಯ ಮಾಡಲು ಸನ್ನಿ ಮುಂದಾಗಿದ್ದಾಳೆ. ಇದಕ್ಕೆ ಹಣ ಸಂಗ್ರಹಿಸಲು ನಿರ್ಧರಿಸಿರುವ ಸನ್ನಿ ಹರಾಜಿನಲ್ಲಿ ಒಬ್ಬ ವ್ಯಕ್ತಿಯನ್ನು ಆಯ್ಕೆ ಮಾಡಲಿದ್ದು, ಅವ್ರ ಜೊತೆ ಊಟ ಮಾಡಲಿದ್ದಾಳೆ. ಅತಿ ಹೆಚ್ಚು ಹರಾಜು ಮೊತ್ತ ನೀಡುವ ವ್ಯಕ್ತಿಗಳು ಸನ್ನಿ ಜೊತೆ 2 ಗಂಟೆ ಕಳೆಯಬಹುದಾಗಿದೆ. ಸನ್ನಿ 1.68 ಲಕ್ಷ ರೂಪಾಯಿ ಗಳಿಸುವ ನಿರೀಕ್ಷೆ ಹೊಂದಿದ್ದಾಳೆ. ವಿಜೇತರಿಗೆ ಊಟ ಉಚಿತವಾಗಿ ಸಿಗಲಿದೆ. ವೈನ್ ಗೆ ಪ್ರತ್ಯೇಕ ಹಣ ನೀಡಬೇಕಾಗುತ್ತದೆ. ಈ ಹರಾಜಿನಲ್ಲಿ ಪಾಲ್ಗೊಳ್ಳುವವರ ವಯಸ್ಸು 18 ವರ್ಷ ಮೇಲ್ಪಟ್ಟಿರಬೇಕು.       

short by Pawan / more at Kannadadunia

Comments