Skip to main content


ಇದೇ ನೋಡಿ "ರೆಬೆಲ್ ಸ್ಟಾರ್" ಅಂಬರೀಶ್ ಪುತ್ರ ನ ಮೊದಲ ಸಿನಿಮಾದ ಹೆಸರು

‘ರೆಬೆಲ್ ಸ್ಟಾರ್’ ಅಂಬರೀಶ್ ಪುತ್ರ ಅಭಿಷೇಕ್ ನಟಿಸಲಿರುವ ಚೊಚ್ಚಲ ಚಿತ್ರದ ಬಗ್ಗೆ ಸಾಕಷ್ಟು ಕೂತುಹಲಕ್ಕೆ ಕಾರಣವಾಗಿದೆ. ಈ ನಡುವೆ ಸ್ಯಾಂಡಲ್ ವುಡ್ ನಲ್ಲಿ ಅಪ್ಪನಂತೆ ಮಗನನ್ನು ದೊಡ್ಡಮಟ್ಟದಲ್ಲಿ ಸ್ಟಾರ್ನ್ನಾಗಿ ಪರಿಚಯಿಸುವ ಹೊಣೆ ಹೊತ್ತಿರುವ ನಿರ್ಮಾಪಕ ಸಂದೇಶ್ ನಾಗರಾಜ್ ಮತ್ತು ನಿರ್ದೇಶಕ ನಾಗಶೇಖರ್ ಈ ಚಿತ್ರಕ್ಕೆ ‘ಅಮರ್’ ಎಂದು ಶೀರ್ಷಿಕೆ ಆಯ್ಕೆಯನ್ನು ಮಾಡಿಕೊಂಡಿದ್ದಾರೆ. ಇನ್ನು ಸಿನಿಮಾಕ್ಕೆ ಸಂಬಂದಪಟ್ಟಂತೆ ಶೀಘ್ರದಲ್ಲೇ ಸುದ್ದಿಗೋಷ್ಠಿ ಕರೆದು ಅಭಿಷೇಕ್ ಲುಕ್ ಬಹಿರಂಗಪಡಿಸಬೇಕು ಎಂಬ ಆಲೋಚನೆ ಚಿತ್ರತಂಡಕ್ಕಿದ್ದು, ಈ ನಿಟ್ಟಿನಲ್ಲಿ ಮೇ 29ರಂದು ಅಂಬರೀಶ್ ಜನ್ಮದಿನ, ಅಂದೇ ‘ಅಮರ್’ಗೆ ಚಾಲನೆ ನೀಡಬೇಕು ಎಂಬುದು ನಿರ್ಮಾಪಕ ಸಂದೇಶ್ ನಾಗರಾಜ್ ಅವರ ಬಯಕೆಯಾಗಿದೆಯಂತೆ.

short by Pawan / more at Kannada News Now

Comments