Skip to main content


ಫ್ಯಾಮಿಲಿ ಫ್ಲಾನ್ ಬಗ್ಗೆ ಕೊಹ್ಲಿ ಹೇಳಿದ್ದೇನು?

ಇದೇ ಮೊದಲ ಬಾರಿ ಕುಟುಂಬ ಯೋಜನೆ ಬಗ್ಗೆಯೂ ಕೊಹ್ಲಿ ಮಾತನಾಡಿದ್ದಾರೆ. ಅನುಷ್ಕಾ ಶರ್ಮಾ ಧಾರ್ಮಿಕವಾಗಿದ್ದಾರೆ. ಅವ್ಳ ಜೊತೆಗಿದ್ದು ನನ್ನಲ್ಲೂ ಸಾಕಷ್ಟು ಬದಲಾವಣೆಯಾಗಿದೆ. ನಾನು ಮೊದಲಿಗಿಂತ ತುಂಬಾ ಶಾಂತವಾಗಿದ್ದೇನೆಂದು ಕೊಹ್ಲಿ ಹೇಳಿದ್ದಾರೆ. ನಾನು ಈಗ ಯಾವ ಸ್ಥಾನದಲ್ಲಿದ್ದೇನೋ ಅದು ಶಾಶ್ವತವಲ್ಲ. ನನ್ನ ಕುಟುಂಬ ಸದಾ ನನ್ನ ಜೊತೆಯಲ್ಲಿರುತ್ತದೆ ಎಂಬುದು ನನಗೆ ಗೊತ್ತು. ನನ್ನ ಮಕ್ಕಳು ದೊಡ್ಡವರಾಗ್ತಿದ್ದಂತೆ ನನ್ನ ಮನೆಯಲ್ಲಿ ನನ್ನ ಸಾಧನೆಗೆ ಸಂಬಂಧಿಸಿದ ಯಾವುದೇ ವಸ್ತುವನ್ನು ಇಡುವುದಿಲ್ಲ ಎಂದಿದ್ದಾರೆ ಕೊಹ್ಲಿ. ನಾನು ಗೆದ್ದ ಟ್ರೋಫಿ ಸೇರಿದಂತೆ ವೃತ್ತಿಯ ಯಾವುದೇ ವಸ್ತು ಮನೆಯಲ್ಲಿ ಇರೋದಿಲ್ಲ. ನನ್ನ ಮಕ್ಕಳ ಬೆಳವಣಿಗೆಗೆ ಇದು ಅಡ್ಡಿಯಾಗಬಾರದು ಎಂದು ಕೊಹ್ಲಿ ಹೇಳಿದ್ದಾರೆ.      

short by Pawan / more at Kannadadunia

Comments