Skip to main content


ಕೈಕಾಲು ಹಿಡಿದಾದರೂ ಜನರನ್ನು ಮತಗಟ್ಟೆಗೆ ಕರೆತನ್ನಿ: ಯಡಿಯೂರಪ್ಪ

ಸುಮ್ಮನೆ ಇರಬೇಡಿ.. ಯಾರೆಲ್ಲ ಮತದಾನ ಮಾಡದೇ ಮನೆಯಲ್ಲಿ ಇರುತ್ತಾರೋ, ಅವರನ್ನು ಕೈ ಕಾಲು ಕಟ್ಟಿಯಾದರೂ ಮತಗಟ್ಟೆಗೆ ಕರೆತನ್ನಿ..ವೋಟ್‌ ಹಾಕಿಸಿ. ಹೀಗೆಂದು ಕಾರ್ಯಕರ್ತರನ್ನು ಒತ್ತಾಯಿಸಿದ್ದು ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಬಿ. ಎಸ್‌. ಯಡಿಯೂರಪ್ಪ. ಬೆಳಗಾವಿ ಜಿಲ್ಲೆಯ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್‌ ಬಸವಂತ್ರೈ ದೊಡ್ಡಗೌಡರ್ ಪರ ಮತಯಾಚಿಸುವ ಸಂದರ್ಭ ಮಾತನಾಡಿದ ಯಡಿಯೂರಪ್ಪ ಮತದಾನ ಮಾಡದೇ ಮನೆಯಲ್ಲಿ ಇರುವವರನ್ನು ಮತಗಟ್ಟೆಗೆ ಕರೆತರಬೇಕೆನ್ನುವ ಆವೇಶದ ಭರದಲ್ಲಿ ಕೈ-ಕಾಲು ಕಟ್ಟಿಯಾದರೂ ಮತಗಟ್ಟೆಗೆ ಕರೆತನ್ನಿ ಎಂದಿದ್ದಾರೆ.     

short by NP / more at Vijaya Karnataka

Comments