Skip to main content


ರೋಡ್ ಬದಿ ತಿಂಡಿ ತಿಂದು ಸರಳತೆ ಮೆರೆದ ಸುದೀಪ್

ಕಿಚ್ಚ ಕೋಟ್ಯಾಂತರ ಅಭಿಮಾನಿಗಳ ನೆಚ್ಚಿನ ನಟ. ಬಳ್ಳಾರಿಯಲ್ಲಿಂದು ಶ್ರೀರಾಮುಲು ಹಾಗೂ ಸೋಮಶೇಖರ್ ರೆಡ್ಡಿ ಪರ ಪ್ರಚಾರಕ್ಕೆ ಬಂದ ವೇಳೆ ಸುದೀಪ್ ಮೊಳಕಾಲ್ಮೂರು ಗೆ ತೆರಳ ಬೇಕಿತ್ತು. ಇದಕ್ಕೂ ಮುನ್ಮ ಆಂಧ್ರ ಗಡಿಭಾಗದ ಒಬಳಾಪುರಂ ಬಳಿಯ ರೋಡ್ ಬದಿಯಲ್ಲಿರುವ ಹೊಟೇಲ್‍ನಲ್ಲಿ ತಿಂಡಿ ತಿಂದು ಟೀ ಕುಡಿದರು. ರಾಧಾ ಎನ್ನುವ ಬಡ ಮಹಿಳೆಯ ಚಪ್ಪರದ ಹೊಟೇಲಿನಲ್ಲಿ ಸುದೀಪ್ ಚಿತ್ರಾನ್ನ, ಟೀ ಕುಡಿದರು. ಬಳಿಕ 10 ಸಾವಿರ ರೂಪಾಯಿ ಹಣ ನೀಡಿದ್ದಾರೆ. ಈ ವೇಳೆ ಮಹಿಳೆ ಹಣ ಪಡೆಯಲು ನಿರಾಕರಿಸಿದಾಗ ಒತ್ತಾಯಪೂರ್ವಕವಾಗಿ ಸುದೀಪ್, ಈ ಹಣದಲ್ಲಿ ಮಕ್ಕಳಿಗೆ ಎನಾದರೂ ಗಿಫ್ಟ್ ತೆಗೆದು ಕೊಳ್ಳಿ ಎಂದು ಹೇಳಿದ್ದಾರಂತೆ. ಹೋಟೆಲ್ ಮಾಲಕಿ ರಾಧಾ ಅವರು 2 ಸಾವಿರ ರೂ. ಸಾಕು ಎಂದರೂ ಸುದೀಪ್ 10 ಸಾವಿರ ರೂ. ನೀಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಸುದೀಪ್, ಚುನಾವಣಾ ಪ್ರಚಾರದ ದೃಷ್ಟಿಯಿಂದ ನಾನು ಕೊಟ್ಟಿಲ್ಲ. ಪ್ರೀತಿಯಿಂದ ನಾನು ಕೊಟ್ಟದ್ದೇನೆ ಅಷ್ಟೇ ಎಂದರು. ಈ ವೇಳೆ ಮ್ಯಾನೇಜರ್ ಕಾಸ್ಟ್ಲಿ ಕಪ್ ನಲ್ಲಿ ಟೀ ಕೊಡಲು ಮುಂದಾದ ವೇಳೆ ಸುದೀಪ್ ಪೇಪರ್ ಕಪ್‍ನಲೇ ಟೀ ಕುಡಿದು ಸರಳತೆ ಮೆರೆದರು. ಈ ವೇಳೆ ಸುದೀಪ್ ಗುರುತಿಸಿ ಅಭಿಮಾನಿಗಳು ಅವರ ಜೊತೆ ಸೆಲ್ಫಿ ಕೂಡ ತಗೆಸಿಕೊಂಡು ಹರ್ಷ ವ್ಯಕ್ತಪಡಿಸಿದರು.   

short by Pawan / more at Balkani News

Comments