Skip to main content


ದರ್ಶನ್ ಯಾವ ‘ಎಂಎಲ್ಎ’ ಗೆ ಸಫೋರ್ಟ್ ಮಾಡುತ್ತಿದ್ದಾರೆ..?

ಚಾಲೆಂಜಿಂಗ್ ಸ್ಟಾರ್ ದರ್ಶನ್  ಚಿತ್ರರಂಗಕ್ಕೆ ಬರುವ ಹೊಸಬರನ್ನು ಬೆಳೆಸುತ್ತಾ ಬರುತ್ತಿರುವ ಒಂದೊಳ್ಳೆ ನಟ. ದರ್ಶನ್ ಈಗ 'ಎಂಎಲ್ಎ' ಗೆ ಬೆಂಬಲಕ್ಕೆ ನೀಡುತ್ತಿದ್ದಾರೆ. ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್ ಅಭಿನಯದ 'ಎಂಎಲ್ಎ' ಚಿತ್ರಕ್ಕೆ ನಟ ದರ್ಶನ್ ಸಾಥ್ ನೀಡಲು ಮುಂದಾಗಿದ್ದಾರೆ. 'ಎಂಎಲ್ಎ' ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ದರ್ಶನ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.ಇನ್ನು ದರ್ಶನ್ ಕುರಿತು ಪ್ರಥಮ್ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದು ಹೀಗೆ, ‘ನಿಜಕ್ಕೂ ದರ್ಶನ್ ಸರ್ ಈ ಕಾರಣಕ್ಕೇ ಗ್ರೇಟ್. ಅವತ್ತು ಮೈಸೂರಲ್ಲಿ ಯಜಮಾನ ಸಿನಿಮಾ ಶೂಟಿಂಗ್ ನಡೆಯಬೇಕಾದರೆ ಕಾಲ್ ಮಾಡಿ ಹೋಗಿದ್ದೆ. ಕಂಡೊಡನೆ ಬಹಳ ಪ್ರೀತಿಯಿಂದ ಮಾತಾಡಿದ್ರು. ಆಡಿಯೋ ರಿಲೀಸ್ ಗೆ ಆಹ್ವಾನ ಮಾಡಿದೆ. ಖಂಡಿತಾ ಬರ್ತೀನಮ್ಮ’ ಅಂದರು.ಅಂದಹಾಗೆ ನನ್ನ M.L.A ಸಿನಿಮಾ ಆಡಿಯೋ ಬಿಡುಗಡೆಗೆ ದರ್ಶನ್ ಸರ್ ನ ಕರೆಸಲು ನೆರವಾದ ಎಲ್ಲರಿಗೂ ಚಿರಋಣಿ’ ಎಂದಿದ್ದಾರೆ ಪ್ರಥಮ್.

short by : Nithin / more at Webdunia


Comments