Skip to main content


ಸಲ್ಮಾನ್‌ ಅರ್ಜಿ ವಿಚಾರಣೆ ಇಂದು

19 ವರ್ಷಗಳ ಹಿಂದೆ ಎರಡು ಕೃಷ್ಣಮೃಗಗಳನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಸಲ್ಮಾನ್‌ಖಾನ್‌ ದೋಷಿ ಎಂದು ಘೋಷಿಸಿದ್ದ ಕೋರ್ಟ್‌, ಐದು ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಸಲ್ಮಾನ್‌ಖಾನ್‌ ಪರ ವಕೀಲರು ಜೋಧ್‌ಪುರ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಜೋಧ್‌ಪುರಕ್ಕೆ ಸಲ್ಮಾನ್‌: ಶಿಕ್ಷೆ ವಿಧಿಸಿ ಕೋರ್ಟ್‌ ತೀರ್ಪು ನೀಡಿದ ನಂತರ ಜಾಮೀನು ಪಡೆದಿದ್ದ ಸಲ್ಮಾನ್‌ಖಾನ್‌, ಶಿಕ್ಷೆ ರದ್ದತಿ ಕೋರಿ ಸಲ್ಲಿಸಿದ್ದ ತಮ್ಮ ಮೇಲ್ಮನವಿ ವಿಚಾರಣೆ ಸಂಬಂಧ ಕೋರ್ಟ್‌ಗೆ ಹಾಜರಾಗಲು ಭಾನುವಾರ ಜೋಧ್‌ಪುರಕ್ಕೆ ಬಂದಿಳಿದರು.          

short by NP / more at Prajavani

Comments