Skip to main content


ಉಡುಪಿಗೆ ಪ್ರಧಾನಿ ಭೇಟಿ – ಕೃಷ್ಣ ಮಠ, ದೇವಸ್ಥಾನಕ್ಕೆ ಹೋಗಲ್ಲ ಅಂದ್ರು ಮೋದಿ

ಬಿಜೆಪಿ ಸಮಾವೇಶಕ್ಕೆ ಆಗಮಿಸಲಿರುವ ಪ್ರಧಾನಿ ಮೋದಿ ಶ್ರೀಕೃಷ್ಣಮಠ ಮಠ ಮತ್ತು ದೇವಾಲಯಕ್ಕೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ. ರಾಜಕೀಯ ಪ್ರವಾಸ ಜೊತೆ ಧಾರ್ಮಿಕ ಪ್ರವಾಸವನ್ನು ಮೋದಿ ಮಾಡುವುದಿಲ್ಲ ಎನ್ನುವ ಸಂದೇಶ ಪ್ರಧಾನಿ ಕಚೇರಿಯಿಂದ ರಾಜ್ಯ ಮತ್ತು ಜಿಲ್ಲಾ ಬಿಜೆಪಿಗೆ ಸಂದೇಶ ರವಾನೆಯಾಗಿದೆ. ಪ್ರಧಾನಿ ಮೋದಿ ಮಠಕ್ಕೆ ಬರಬೇಕೆಂದು ನಾವು ಅಪೇಕ್ಷಿಸಿದ್ದೆವು, ಅಧಿಕೃತ ಪಟ್ಟಿಯಲ್ಲಿ ಮೋದಿ ಮಠ ಭೇಟಿ ಕಾರ್ಯಕ್ರಮ ಇಲ್ಲ. ಪ್ರಧಾನಿ ಕಾರ್ಯಾಲಯದ ತೀರ್ಮಾನವೇ ಅಂತಿಮ ಎಂದು ಉಡುಪಿ ಕಾರ್ಯಕ್ರಮದ ಉಸ್ತುವಾರಿ ಉದಯಕುಮಾರ್ ಶೆಟ್ಟಿ ಹೇಳಿದ್ದಾರೆ.          

short by NP / more at Public TV

Comments