Skip to main content


ಮತದಾನ ಮಾಡಿ ಫ್ರೀ ಕಾಫಿ ಕುಡಿಯಿರಿ!

ವೋಟ್ ಹಾಕಿ ಅಂತ ವಿಧ ವಿಧವಾಗಿ ಪ್ರಚಾರ ಮಾಡಿದರೂ ಜನ ವೋಟ್ ಹಾಕೋದೆ ಇಲ್ಲ. ಮತದಾನಕ್ಕೂ ನಮಗೂ ಸಂಬಂಧವೇ ಇಲ್ಲ ಅನ್ನೋ ರೀತಿ ಜನ ವರ್ತನೆ ಮಾಡುತ್ತಾರೆ. ಆದರೆ ಬೆಂಗಳೂರಿನ ಹೃದಯ ಭಾಗದಲ್ಲಿರುವ ಒಂದು ಹೋಟೆಲ್ ಮತದಾನದ ದಿನ ಕಾಫಿ ಫ್ರೀ ಅಂತ ಬೋರ್ಡ್ ಹಾಕಿದೆ. ಬೆಂಗಳೂರಿನ ಹೃದಯ ಭಾಗ ನೃಪತುಂಗ ರಸ್ತೆಯಲ್ಲಿರುವ ನಿಸರ್ಗ ಗ್ರಾಂಡ್ ಹೋಟೆಲ್ ಚುನಾವಣೆಯಲ್ಲಿ ಎಲ್ಲರೂ ತಮ್ಮ ಹಕ್ಕನ್ನ ಚಲಾಯಿಸಲಿ ಅನ್ನೊ ದೃಷ್ಟಿಯಿಂದ ಮತದಾನದ ದಿನ ಫ್ರೀ ಕಾಫಿ ನೀಡಲು ನಿರ್ಧರಿಸಿದೆ. ವೋಟ್ ಹಾಕಿ ಬಂದು ಶಾಯಿಯನ್ನ ತೊರಿಸಿ ಫ್ರೀ ಕಾಫಿ ಕುಡಿಬಹುದು. ಹೋಟೆಲ್ ಗೆ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಚರ್ಚೆ ಮಾಡುತ್ತಾರೆ. ಆದರೆ ವೋಟ್ ಹಾಕುವ ವಿಚಾರ ಬಂದ್ರೆ ಯಾರ್ ಹಾಕುತ್ತಾರೆ ಹೋಗಿ ಅಂತಾರೆ. ಅದಕ್ಕೆ ಮತದಾನದ ಜಾಗೃತಿ ಮೂಡಿಸಲು ಈ ರೀತಿ ಕಾಫಿ ಫ್ರೀ ಅಂತ ಅರಿವು ಮೂಡಿಸುತ್ತಿದ್ದೇವೆ ಎಂದು ಹೋಟೆಲ್ ಮಾಲೀಕರಾದ ಕೃಷ್ಣ ಕುಮಾರ್ ಹೇಳಿದ್ದಾರೆ.    

short by Pawan / more at Public Tv