Skip to main content


ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ನೆನೆದ ಅಲ್ಲು ಅರ್ಜುನ್‌

ಸಿಯಾಚಿನ್‌ ಹಿಮಪಾತದಲ್ಲಿ ಸಿಲುಕಿ ಆರು ದಿನಗಳ ಕಾಲ ಪವಾಡ ಸದೃಶವಾಗಿ ಬದುಕುಳಿದಿದ್ದ, ಮನೋಸ್ಥೈರ್ಯಕ್ಕೆ ಅತ್ಯುನ್ನತ ಮಾದರಿಯಾಗಿದ್ದ ಲ್ಯಾನ್ಸ್‌ ನಾಯಕ್‌ ಹನುಮಂತಪ್ಪ ಅವರ ಬಗ್ಗೆ ಅಲ್ಲು ಅರ್ಜುನ್‌ ನಾಯಕರಾಗಿರುವ ತೆಲುಗಿನ 'ನಾ ಪೇರು ಸೂರ್ಯ' ಚಿತ್ರದಲ್ಲಿ ಪ್ರಸ್ತಾಪಿಸಲಾಗಿದೆ. ನಾ ಪೇರು ಸೂರ್ಯ, ನಾ ಇಲ್ಲು ಇಂಡಿಯಾ ಚಿತ್ರದಲ್ಲಿ ಅಲ್ಲು ಅರ್ಜುನ್‌ ಸೈನಿಕನ ಪಾತ್ರದಲ್ಲಿ ನಟಿಸಿದ್ದಾರೆ.  ಹನುಮಂತಪ್ಪ ನಮಗೆಲ್ಲ ಮಾದರಿ, ಅಷ್ಟು ದಿನಗಳ ಕಾಲ ಕೊರೆಯುವ ಚಳಿಯಲ್ಲಿ ಬದುಕಿದ್ದರು, ಅವರ ಜಾಗದಲ್ಲಿ ನಾನು ಇರಬೇಕಿತ್ತು ಎಂದು ನನಗೆ ಆಗಾಗ ಅನ್ನಿಸುತ್ತದೆ, ಹನುಮಂತಪ್ಪ ಸಲಾಮ್‌ ಎಂದು ನಾಯಕ ಅಲ್ಲು ಅರ್ಜುನ್‌ ಹೇಳುತ್ತಾರೆ. ಈ ಮೂಲಕ ಸೈನ್ಯದ ಕಥೆ ಹೇಳಿರುವ ನಿರ್ದೇಶಕ ವಕ್ಕಂತಮ್ ವಂಶಿ, ಕನ್ನಡಿಗ ಹನುಮಂತಪ್ಪಗೆ ಗೌರವ ಸಲ್ಲಿಸಿದ್ದಾರೆ.     

short by Pawan / more at Vijayakarnataka


Comments