Skip to main content


ಶ್ರೀದೇವಿ ಕೊನೆ ಭೇಟಿ ಬಗ್ಗೆ ಮಗಳು ಜಾಹ್ನವಿ ಹೇಳಿದ್ದೇನು?

ಅಮ್ಮ ಹೋದ ಮೇಲೆ ಆ ಜಾಗವನ್ನು ಜೀವನದಲ್ಲಿ ಎಂದೂ, ಯಾರೂ ತುಂಬಲು ಸಾಧ್ಯವಿಲ್ಲವೆಂದು ಜಾಹ್ನವಿ ಹೇಳಿದ್ದಾಳೆ. ಅಮ್ಮನಿಗೆ ನಾನು ಸಿನಿಮಾ ರಂಗಕ್ಕೆ ಬರುವುದು ಇಷ್ಟವಿರಲಿಲ್ಲ. ನಾನು ತುಂಬಾ ಭಾವುಕಳು. ಹಾಗಾಗಿ ನನ್ನ ಬಗ್ಗೆ ಹೆಚ್ಚು ಕಾಳಜಿಯಿತ್ತು ಎಂದು ಜಾಹ್ನವಿ ಹೇಳಿದ್ದಾಳೆ. ಲಂಡನ್ ಗೆ ಹೋಗುವ ದಿನ ನಾನು ತುಂಬಾ ಬ್ಯುಸಿಯಿದ್ದೆ. ಅವ್ರು ಪ್ಯಾಕಿಂಗ್ ನಲ್ಲಿ ಬ್ಯುಸಿಯಿದ್ದರು. ಹಾಗಾಗಿ ನಾನು ರೂಮಿಗೆ ಹೋಗಿ ಮಲಗಿದ್ದೆ. ಆದ್ರೆ ರಾತ್ರಿ ಅಮ್ಮ ಬಂದು ತಲೆ ಸವರಿದ್ದರು. ನಿದ್ರೆಯಲ್ಲೂ ನನಗೆ ಅದು ಗೊತ್ತಾಗಿತ್ತು ಎಂದು ಜಾಹ್ನವಿ ಹೇಳಿದ್ದಾಳೆ. ನಾನು ಅಮ್ಮ, ತಂಗಿ ಒಟ್ಟಿಗೆ ಶಾಪಿಂಗ್ ಗೆ ಹೋಗ್ತಿದ್ದೆವು. ಆಗ ತಂದೆ ಮೂರು ಮಹಿಳೆಯರು ಒಂದೇ ಕೆಲಸಕ್ಕಿಳಿದಿದ್ದಾರೆಂದು ತಮಾಷೆ ಮಾಡ್ತಿದ್ದರು ಎಂದು ಜಾಹ್ನವಿ ಹಿಂದಿನ ದಿನಗಳನ್ನು ನೆನೆದಿದ್ದಾಳೆ.       

short by Pawan / more at Kannadadunia

Comments