Skip to main content


ಅಮೋಲಿಗೆ ಪುನೀತ್ ಕಂಠಸಿರಿ

ನಟ ಪುನೀತ್ ರಾಜ್​ಕುಮಾರ್ ಸದ್ಯ ಪವನ್ ಒಡೆಯರ್ ನಿರ್ದೇಶನದ ‘ನಟಸಾರ್ವಭೌಮ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಅವರು ಹೀರೋ ಜತೆಗೆ ಬೇಡಿಕೆಯ ಸಿಂಗರ್ ಕೂಡ ಹೌದು. ಇದೆಲ್ಲದರ ಜತೆಗೆ ಕೆಲ ಸಿನಿಮಾಗಳಿಗೆ ಹಿನ್ನೆಲೆ ಧ್ವನಿ ಕೂಡ ನೀಡಿದ್ದಾರೆ ಅಪು್ಪ. ರಾಷ್ಟ್ರಪ್ರಶಸ್ತಿ ವಿಜೇತರಾದ ಜಾಸ್ಮಿನ್ ಮತ್ತು ಅವಿನಾಶ್ ರಾಯ್ ನಿರ್ದೇಶನ ಮಾಡಿರುವ ಈ ಡಾಕ್ಯುಮೆಂಟರಿ ಭಾರತದಲ್ಲಿ ಕಾಣೆಯಾಗುತ್ತಿರುವ ಹೆಣ್ಣುಮಕ್ಕಳ ಕುರಿತಾದ ಕಥೆಯನ್ನು ಹೇಳಲಿದೆಯಂತೆ. ಸದ್ಯ ‘ಅಮೋಲಿ’ ಟ್ರೇಲರ್ ರಿಲೀಸ್ ಆಗಿದ್ದು, ಅದರಲ್ಲಿ ಭಾರತದ ಹುಡುಗಿಯರು ಕಾಣೆಯಾಗುತ್ತಿರುವ ಚಿಕ್ಕ ಅಂಕಿ-ಅಂಶ ನೀಡಿದ್ದಾರೆ ನಿರ್ದೇಶಕರು. ಮೇ 7ರಂದು ತೆರೆಕಾಣುತ್ತಿರುವ 30 ನಿಮಿಷದ ಈ ಸಾಕ್ಷ್ಯಚಿತ್ರ ಕನ್ನಡ ಮಾತ್ರವಲ್ಲದೆ, ಹಿಂದಿ, ಇಂಗ್ಲಿಷ್, ತಮಿಳು ಮತ್ತು ಬಂಗಾಲಿ ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಹಿಂದಿಯಲ್ಲಿ ರಾಜ್​ಕುಮಾರ್ ರಾವ್, ಇಂಗ್ಲಿಷ್​ನಲ್ಲಿ ವಿದ್ಯಾಬಾಲನ್, ತಮಿಳಿನಲ್ಲಿ ಕಮಲ್ ಹಾಸನ್ ಮತ್ತು ಬಂಗಾಲಿಯಲ್ಲಿ ಜಿಶು ಸೇನ್​ಗುಪ್ತ ಧ್ವನಿ ನೀಡಿದ್ದಾರೆ. ಈ ಚಿತ್ರಕ್ಕೆ ಕಲ್ಚರ್ ಮಷೀನ್ ಬಂಡವಾಳ ಹೂಡಿದೆ. ಕನ್ನಡದಲ್ಲಿ ಪಿಆರ್​ಕೆ ಆಡಿಯೋ ಸಂಸ್ಥೆ ಈ ಡಾಕ್ಯುಮೆಂಟರಿ ಬಿಡುಗಡೆ ಮಾಡುತ್ತಿದೆ.    

short by Pawan / more at Vijayavani

Comments