Skip to main content


ಚೈನೀಸ್ ಬಾಕ್ಸ್ ಆಫೀಸ್ ನಲ್ಲಿ "ಬಾಹುಬಲಿ-2" ಗಳಿಕೆ ಎಷ್ಟು ಗೊತ್ತಾ.?

'ಬಾಹುಬಲಿ -2 ದಿ ಕನ್ ಕ್ಲೂಷನ್' ಚಿತ್ರ ಚೀನಾ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚೀನಾದಲ್ಲಿ ರಿಲೀಸ್ ಆಗಿ ಒಂದೇ ದಿನಕ್ಕೆ 20 ಕೋಟಿ ರೂಪಾಯಿ ಬಾಚಿದೆ. ಈ ಮೂಲಕ ವಿಶ್ವದಾದ್ಯಂತ ಬಾಹುಬಲಿ ಚಿತ್ರದ ಇದುವರೆಗಿನ ಗಳಿಕೆ 1735 ಕೋಟಿಗೆ ಏರಿಕೆಯಾಗಿದೆ. ಈ ಮೂಲಕ ಬಾಹುಬಲಿ ಎಲ್ಲಾ ದಾಖಲೆಗಳನ್ನು ಮುರಿದಿದೆ. ಇದುವರೆಗೂ 'ದಂಗಲ್' ಚಿತ್ರ ಚೀನಾ ಬಾಕ್ಸ್ ಆಫೀಸ್ ನಲ್ಲಿ ಅತ್ಯಂತ ಹೆಚ್ಚು ಗಳಿಕೆ ಕಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಲ್ಲದೆ ವಿಶ್ವಾದ್ಯಂತ 1864 ಕೋಟಿ ರೂಪಾಯಿ ಬಾಚಿತ್ತು. ಸದ್ಯದಲ್ಲೇ ಈ ದಾಖಲೆಯನ್ನು 'ಬಾಹುಬಲಿ' ಚಿತ್ರ ಮುರಿಯಲಿದೆ. ವರ್ಡ್ ವೈಡ್ ಬಾಕ್ಸ್ ಆಫೀಸ್ ನಲ್ಲಿ 2000 ಕೋಟಿ ರೂ. ಗಳಿಸೋ ಸನಿಹದಲ್ಲಿದೆ. ಈ ಮೂಲಕ ಭಾರತೀಯ ಚಿತ್ರವೊಂದು ಹೊಸ ದಾಖಲೆಗೆ ಸಜ್ಜಾಗ್ತಿದೆ. ಎಸ್.ಎಸ್. ರಾಜಮೌಳಿ ನಿರ್ದೇಶನದ, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ, ತಮನ್ನಾ ಅಭಿನಯದ 'ಬಾಹುಬಲಿ 2' ಚಿತ್ರ 2017ರಲ್ಲಿ ರಿಲೀಸ್ ಆಗಿ ದೇಶಾದ್ಯಂತ ಭಾರಿ ಗಳಿಕೆ ಕಂಡಿತ್ತು.       

short by Prajwal / more at Kannadadunia

Comments