Skip to main content


ಇದು ನನ್ನ ಕೊನೆಯ ಚುನಾವಣೆ, ಮತ ನೀಡಿ ಗೆಲ್ಲಿಸಿ - ಸಿಎಂ ಸಿದ್ದರಾಮಯ್ಯ

ಈ ಬಾರಿ ಚುನಾವಣೆ ನನ್ನ ಕೊನೆಯ ಚುನಾವಣೆ ಇಲ್ಲಿಂದಲೇ ನನಗೆ ಅಧಿಕಾರ ನೀಡಿ. ಮತ್ತೆ ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಹೀಗೆಂದವರು ಮುಖ್ಯಮಂತ್ರಿ ಸಿದ್ದರಾಮಯ್ಯ . ಮತಕ್ಕಾಗಿ ಈ ಹೇಳಿಕೆಯ ಮೂಲಕ ತನ್ನ ಕೊನೆಯ ಅಸ್ತ್ರವನ್ನು ಪ್ರಯೋಗಿಸಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸಿದರು. ಚಾಮುಂಡೇಶ್ವರಿ ಕ್ಷೇತ್ರದ ಹೊಸಹುಂಡಿ ಗ್ರಾಮದ ಗೆಜ್ಜಗಳ್ಳಿಯಲ್ಲಿ ರೋಡ್ ಶೋ ಮೂಲಕ ಮತ ಯಾಚನೆ ಮಾಡಿದ ಅವರು ಕರ್ನಾಟಕ ರಾಜಕಾರಣದ ಘಟನಾಘಟಿಗಳ ಮುಂದೆ ನನಗೆ, ರಾಜಕೀಯ ಪುರ್ನಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದಲ್ಲೇ ನನ್ನ ಚುನಾವಣೆ, ಇಲ್ಲಿಂದ ಗೆದ್ದರೆ ನಾನು ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ನನಗೆ ಈ ಹಿಂದೆ ತೋರಿದ ಪ್ರೀತಿಯನ್ನು ಮೇ.12ರಂದು ತೋರಿಸಿ ನನ್ನನ್ನು ಗೆಲ್ಲಿಸುವ ಮೂಲಕ ವಿಧಾನಸೌಧಕ್ಕೆ ಕಳುಹಿಸಿ ಎಂದು ವಿನಂತಿ ಮಾಡಿದರು.         

short by NP / more at Daijiworld247

Comments