Skip to main content


ರಾತ್ರಿ ವೇಳೆ ಗೆಳೆಯನೊಂದಿಗೆ ದರ್ಶನ್ ರೌಂಡ್ಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಅಭಿಮಾನಿಗಳ ಸಂಖ್ಯೆ ಜಾಸ್ತಿ. ಇದರೊಂದಿಗೆ ಅವರ ಗೆಳೆಯರ ಬಳಗ ಕೂಡ ದೊಡ್ಡದಿದೆ. ಬಿಡುವಿನ ವೇಳೆಯಲ್ಲಿ ದರ್ಶನ್ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಾರೆ. ಅವರ ಗೆಳೆಯ ಧರ್ಮ ಕೀರ್ತಿರಾಜ್ ಹೊಸ ರಾಯಲ್ ಎನ್ ಫೀಲ್ಡ್ ಥಂಡರ್ ಬರ್ಡ್ ಬೈಕ್ ಖರೀದಿಸಿದ್ದು, ಇದರಲ್ಲಿ ದರ್ಶನ್ ಸುತ್ತಾಡಿದ್ದಾರೆ. ಧರ್ಮ ಕೀರ್ತಿರಾಜ್ ಹಾಗೂ ದರ್ಶನ್ ರಾತ್ರಿ ಹೊಸ ಬೈಕ್ ನಲ್ಲಿ ಸುತ್ತಾಡಿದ್ದು, ಈ ಸಂಭ್ರಮದ ಕ್ಷಣದ ಫೋಟೋವನ್ನು ಧರ್ಮ ಸೋಷಿಯಲ್ ಮೀಡಿಯಾ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.       

short by Pawan / more at Kannadadunia

Comments