ಫೈರಿಂಗ್ ಸ್ಟಾರ್ ಹುಚ್ಚ ವೆಂಕಟ್ ತಮ್ಮ ಮದುವೆ ನಿರ್ಧಾರವನ್ನು ಮಡಿಕೇರಿಯಲ್ಲಿ ರಿವೀಲ್ ಮಾಡಿದ್ದಾರೆ. ಮದುವೆ ಆಗೊಲ್ವಾ? ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಅವರು ಮೂರು ತಿಂಗಳಲ್ಲೇ ಮದುವೆಯಾಗುತ್ತಿದ್ದೇನೆ ಎಂದರು. ನಗರಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಡುಗಿ ಯಾರು ಎಂಬ ಪ್ರಶ್ನೆಗೆ, `ಹೇಳ್ತೇನೆ, ನನ್ನ ಸಂಬಂಧಿಕರಾದ ಮಾಧ್ಯಮದವರನ್ನು ಮದುವೆಗೆ ತಪ್ಪದೇ ಕರೆಯುತ್ತೇನೆ. ಆದರೆ, ಪೆನ್ನು, ಕ್ಯಾಮರಾ ಬದಿಗಿಟ್ಟು ಮದುವೆಗೆ ಬರಬೇಕೆಂದು ಅವರು ಆಹ್ವಾನ ನೀಡಿದರು. ತಾನು 16 ವರ್ಷಗಳ ಕಾಲ ಕೊಡಗಿನ ವಿದ್ಯಾಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡಿದ್ದ ಬಗ್ಗೆ ಮತ್ತು ಆ ವೇಳೆ ಸೋಮವಾರಪೇಟೆಯ ಯುವತಿವೋರ್ವಳನ್ನ ಪ್ರೀತಿಸಿದ್ದ ಬಗ್ಗೆ ಹುಚ್ಚ ವೆಂಕಟ್ ಗುಟ್ಟೊಂದನ್ನು ಬಿಚ್ಚಿಟ್ಟರು.
short by Pawan / more at Kannada News Now
Comments
Post a Comment