Skip to main content


ಹೆದರಿಸಲು ರೆಡಿಯಾದ ಗೋಲ್ಡನ್ ಸ್ಟಾರ್..

ಈ ಹಿಂದೆ ಗೋಲ್ಡನ್ ಸ್ಟಾರ್ ಗಣೇಶ್ , ನವರಸ ನಾಯಕ ಜಗ್ಗೇಶ್ ಕಾಂಬಿನೇಶನ್ ನಲ್ಲಿ ಪಿ ವಾಸು ಅವರು ಹಾರರ್ ಕಾಮಿಡಿ ಚಿತ್ರ ಮಾಡಲಿದ್ದಾರೆ ಎಂಬ ಸುದ್ದಿಯಿತ್ತು. ಇದೀಗ ನಿಜವಾಗಿದೆ. ಆದರೆ ಈ ಚಿತ್ರವನ್ನು ಪಿ ವಾಸು ಬದಲಿಗೆ ನಾಗಣ್ಣ ಅವರು ನಿರ್ದೇಶನ ಮಾಡಲಿದ್ದು, ಗಣೇಶ್ ಒಬ್ಬರೇ ಈ ಚಿತ್ರದಲ್ಲಿ ಕಾಣಿಸಿಕೊಳ‍್ಳಲಿದ್ದಾರೆ.

ಗಣೇಶ್ ಇದುವರೆಗೂ ಮಾಡಿರುವ ಸಿನಿಮಾಗಳಲ್ಲಿ ಲವ್ ಸ್ಟೋರಿಯೇ ಹೆಚ್ಚು. ಜೊತೆಗೆ ರೊಮ್ಯಾಂಟಿಕ್ ಕಾಮಿಡಿಯಂತೂ ಇದ್ದೇ ಇರುತ್ತದೆ. ಆಗೊಮ್ಮೆ ಈಗೊಮ್ಮೆ ಆಯಕ್ಷನ್ ಅವತಾರದಲ್ಲೂ ಮಿಂಚಿದ್ದಾರೆ. ಆದರೆ, ಅವರು ಈವರೆಗೂ ಮಾಡಿರದ ಒಂದು ಪ್ರಕಾರ ಎಂದರೆ, ಅದು ಹಾರರ್! ಇದೀಗ ಗಣೇಶ್ ಹಾರರ್ ಸಿನಿಮಾದಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇದೇ ಮೊದಲ ಬಾರಿಗೆ ಈ ಥರದ ಚಿತ್ರದಲ್ಲಿ ಗಣೇಶ್ ನಟಿಸುತ್ತಿರುವುದರಿಂದ ಅಭಿಮಾನಿಗಳು ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.       

short by Pawan / more at Balkani News

Comments