Skip to main content


ಟಾಲಿವುಡ್ ನ ಮತ್ತೊಂದು ಚಿತ್ರಕ್ಕೆ ರಶ್ಮಿಕಾ ನಾಯಕಿ

ಸ್ಯಾಂಡಲ್ ವುಡ್ ನ ಪ್ರೇಕ್ಷಕರ ಮನಸ್ಸು ಗೆದ್ದಿರುವ ನಾಯಕಿ ರಶ್ಮಿಕಾ ಮಂದಣ್ಣ ಅವರಿಗೆ ಸಾಲು ಸಾಲು ಅವಕಾಶಗಳು ಹುಡುಕಿಕೊಂಡು ಬರುತ್ತಿವೆ. ಟಾಲಿವುಡ್ ನಲ್ಲಿಯೂ ಪ್ರಖ್ಯಾತಿ ಗಳಿಸುತ್ತಿರುವ ರಶ್ಮಿಕಾ ಇತ್ತೀಚಿಗಷ್ಟೆ ಮಲ್ಟಿ ಸ್ಟಾರ್ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ಅದರ ಬೆನ್ನಲ್ಲೇ ಕಿರಿಕ್ ಪಾರ್ಟಿ ಬೆಡಗಿ ಮತ್ತೊಂದು ತೆಲಗು ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಸುದ್ದಿ ಆಗಿದೆ. ಅಖಿಲ್ ಅಕ್ಕಿನೇನಿ ಅಭಿನಯದ ಹೊಸ ಸಿನಿಮಾ ಜೂನ್ ತಿಂಗಳಲ್ಲಿ ಸೆಟ್ಟೇರಲಿಯಂತೆ. ಆ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಲು ರಶ್ಮಿಕಾಗೆ ಆಫರ್ ಬಂದಿದೆ. ಆದರೆ ಜೂನ್ ತಿಂಗಳಲ್ಲಿ ವಿಜಯ್ ದೇವರಕೊಂಡ ಜೊತೆ ಆಕ್ಟ್ ಮಾಡುತ್ತಿರುವ ಸಿನಿಮಾದ ಚಿತ್ರೀಕರಣ ಕೂಡ ಆರಂಭ ಆಗಲಿದೆ. ಎರಡು ಸಿನಿಮಾಗಳ ಶೂಟಿಂಗ್ ಡೇಟ್ ಸರಿಯಾಗಿ ಹೊಂದಿಕೊಂಡರೆ ರಶ್ಮಿಕಾ ಅಖಿಲ್ ಜೊತೆಯೂ ಅಭಿನಯ ಮಾಡುತ್ತಾರೆ. ಈಗಾಗಲೇ ಅಕ್ಕಿನೇನಿ ನಾಗಾರ್ಜುನ ಹಾಗೂ ನಾನಿ ಅಭಿನಯ ಮಾಡುತ್ತಿರುವ ಚಿತ್ರದಲ್ಲಿ ಕಿರಿಕ್ ಬೆಡಗಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. 

short by Prajwal / more at Filmibeat