Skip to main content


ಕರ್ನಾಟಕ ರಾಜಕಾರಣದ ಬಗ್ಗೆ ಮಾತನಾಡಿದ ರಜಿನಿಕಾಂತ್

ಮಕ್ಕಳಂ ಮದ್ರಂ ಸಂಘಟನೆಯ ಮಹಿಳಾ ಘಟಕದ ಸಭೆಯಲ್ಲಿ ಭಾಗವಹಿಸಿ, ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಬಹುಮತ ಸಾಬೀತುಪಡಿಸಲು ಬಿಜೆಪಿಗೆ 15 ದಿನ ಕಾಲಾವಕಾಶ ನೀಡಿದ್ದು ಸೂಕ್ತ ಕ್ರಮವಲ್ಲ. ಕರ್ನಾಟಕ ರಾಜಕೀಯದಲ್ಲಿ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ್ ರಾಜ್ಯಪಾಲರ ನಡೆಯನ್ನು ಬದಿಗಿಟ್ಟು, ನ್ಯಾಯ ದೊರಕಿಸಿಕೊಟ್ಟಿದ್ದಕ್ಕೆ ಧನ್ಯವಾದ ಎಂದು ತಿಳಿಸಿದರು. ಕರ್ನಾಟಕದಲ್ಲಿ ಯಾವುದೇ ಪಕ್ಷ ಆಡಳಿತಕ್ಕೆ ಬಂದರೂ ಸರಿ, ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೀಡಿದ ನಿರ್ದೇಶನವನ್ನು ಅನುಷ್ಟಾನಕ್ಕೆ ತರಬೇಕು. ಕೋರ್ಟ್ ಸ್ಪಷ್ಟ ಆದೇಶ ನೀಡಿದ್ದು, ನಿರ್ವಹಣಾ ಮಂಡಳಿ ಅಥವಾ ಪ್ರಾಧಿಕಾರವೆಂಬ ತಾಂತ್ರಿಕ ಚೌಕಟ್ಟನ್ನು ಪ್ರದರ್ಶಿಸಬಾರದು ಎಂದು ಅವರು ಹೇಳಿದರು.    

short by Pawan / more at Balkani News

Comments