Skip to main content


ಬಾಯ್ ಫ್ರೆಂಡ್ ಭೇಟಿಗಾಗಿ ಗುಟ್ಟಾಗಿ ದುಬೈಗೆ ಹೋಗಿದ್ರಾ ಅನುಷ್ಕಾ?

ಬಾಹುಬಲಿ ಜೋಡಿ ಅನುಷ್ಕಾ, ಪ್ರಭಾಸ್ ನಡುವೆ ಕುಚ್ ಕುಚ್ ನಡೀತಿದೆ ಅಂತಾ ಎಲ್ರೂ ಮಾತಾಡ್ತಾರೆ. ಬಾಹುಬಲಿ ನಂತರ ಪ್ರಭಾಸ್ ಅಭಿನಯದ ‘ಸಾಹೋ’ ಚಿತ್ರದ ಶೂಟಿಂಗ್ ದುಬೈನಲ್ಲಿ ನಡೆಯುತ್ತಿದೆ. ಸ್ಟಂಟ್ ನೃತ್ಯ ನಿರ್ದೇಶಕ ಕೆನ್ನಿ ಬಟ್ಸ್, ನೇತೃತ್ವದಲ್ಲಿ ಭಾರಿ ಆ್ಯಕ್ಷನ್ ಸೀಕ್ವೆನ್ಸ್ ಗಳನ್ನು ಚಿತ್ರಿಸಲಾಗ್ತಿದೆ. ಈ ಮಧ್ಯೆ ಪ್ರಭಾಸ್ ನೋಡಲು ಅನುಷ್ಕಾ ದುಬೈಗೆ ಹೋಗಿ ಬಂದಿರುವುದು ಸುದ್ದಿಯಾಗಿದೆ. ದುಬೈನಲ್ಲಿ ಪ್ರಭಾಸ್ ಆರೋಗ್ಯ ವಿಚಾರಿಸಿ, ತುಂಬಾ ಕಷ್ಟಕರವಾದ ಸ್ಟಂಟ್ ಮಾಡದಂತೆ ಅನುಷ್ಕಾ, ಪ್ರಭಾಸ್ ಗೆ ತಿಳಿಸಿದ್ದಾರಂತೆ. 2014ರಲ್ಲಿ ಪ್ರಭಾಸ್ ಗೆ ಎರಡು ಬಾರಿ ಭುಜಕ್ಕೆ ಗಾಯವಾಗಿತ್ತು. ಹೀಗಾಗಿ ಅನುಷ್ಕಾ ತನ್ನ ಬಾಯ್ ಫ್ರೆಂಡ್ ಗೆ ರಿಸ್ಕಿ ಸ್ಟಂಟ್ ಮಾಡದಂತೆ ಎಚ್ಚರಿಸಿದ್ದಾರೆ ಅಂತಾ ಹೇಳಲಾಗ್ತಿದೆ. ಇಷ್ಟೆಲ್ಲಾ ಪ್ರೀತಿ ಇರೋ ಈ ಜೋಡಿ ಎಂದೂ ಸಾರ್ವಜನಿಕವಾಗಿ ತಮ್ಮ ಪ್ರೀತಿಯನ್ನು ಒಪ್ಪಿಕೊಂಡಿಲ್ಲ.       

short by Pawan / more at Kannadadunia

Comments