Skip to main content


ಮತ್ತೊಂದು ದುಬಾರಿ ಕಾರನ್ನು ಪರ್ಚೆಸ್ಸ್ ಮಾಡಿದ ದಚ್ಚು!

ಕಾರುಗಳ ಮೇಲೆ ಕಾರು ಖರೀದಿ ಮಾಡುತ್ತಿರುವ ಡಿ ಬಾಸ್ ಈಗ ಮತ್ತೊಂದು ಹೊಸ ಕಾರನ್ನು ಮನೆಗೆ ತಂದಿದ್ದಾರೆ. ನಿನ್ನೆ ತಾನೆ ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ವಿವಾಹ ವಾರ್ಷಿಕೋತ್ಸವ ಇತ್ತು. ಅದರ ಜೊತೆಗೆಯೇ ಈಗ ದರ್ಶನ್ ಒಂದು ಕಾರು ಕೊಂಡಿದ್ದು ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಈಗಾಗಲೇ ದರ್ಶನ್ ಮನೆಯಲ್ಲಿ ಸಿಕ್ಕಾಪಟ್ಟೆ ಕಾರುಗಳಿವೆ. ಅದರ ಜೊತೆಗೆ ಈಗ ಫೋರ್ಡ್ ಮಸ್ಟಂಗ್ (ford mustang) ಕಾರು ಸಹ ಆ ಲಿಸ್ಟ್ ಗೆ ಸೇರಿದೆ. ಕಳೆದ ಕೆಲ ತಿಂಗಳ ಹಿಂದೆಯಷ್ಟೆ 5.8 ಕೋಟಿಯ ಲಂಬೋರ್ಗಿನಿ ಕಾರು ಖರೀದಿ ಮಾಡಿದ್ದ ದರ್ಶನ್ ಈಗ ಮತ್ತೊಂದು ಹೊಸ ಕಾರಿನ ಮಾಲೀಕನಾಗಿದ್ದಾರೆ. ಹಳದಿ ಬಣ್ಣದ ಕಾರು ದರ್ಶನ್ ಬಳಿ ಸದ್ಯ ಇರುವ ಕಾರುಗಳು ಕೆಂಪು ನೀಲಿ, ಕಪ್ಪು ಮತ್ತು ಬಿಳಿ ಬಣ್ಣದಾಗಿವೆ.     

short by Pawan / more at Balkani News

Comments