Skip to main content


"ಆಪರೇಷನ್‌ ಕಮಲ" ಸೋತಿದ್ದೇಕೆ?

ಇದಕ್ಕೆ ಎರಡು ಮುಖ್ಯ ಕಾರಣಗಳು. ಮೊದಲನೆಯದು, ಶಾಸಕರನ್ನು ಸೆಳೆಯಲು ಬಿಜೆಪಿಗೆ ಸಾಕಷ್ಟು ಸಮಯ ಸಿಗಲಿಲ್ಲ. ಎರಡನೆಯದು, ಬಿಜೆಪಿಯಲ್ಲಿ ಮುಂದೆ ತಮ್ಮ ಭವಿಷ್ಯ ಅನಿಶ್ಚಿತ ಎನ್ನುವುದು. ಈ ಹಿಂದೆ 'ಆಪರೇಷನ್‌ ಕಮಲ'ಕ್ಕೆ ಒಳಗಾಗಿ ಬಿಜೆಪಿ ಸೇರಿದ ಎಲ್ಲ ಶಾಸಕರು ಬಳಿಕ ರಾಜಕೀಯವಾಗಿ ಹಿನ್ನಡೆ ಅನುಭವಿಸಿದ್ದರು, ಆದ್ದರಿಂದ ಬಿಜೆಪಿಗೆ ಜಿಗಿಯಲು ಹಲವು ಶಾಸಕರು ಹಿಂದೇಟು ಹಾಕಿದರು ಎಂದು ಮೂಲಗಳು ಹೇಳಿವೆ. ಅಲ್ಲದೆ, 2019ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ಕಾಂಗ್ರೆಸ್‌ ನೇತೃತ್ವದಲ್ಲಿ ಎಲ್ಲ ಪ್ರಾದೇಶಿಕ ಪಕ್ಷಗಳೂ ಒಗ್ಗೂಡುವುದರಿಂದ, ಬಿಜೆಪಿ ಮತ್ತೆ ಕೇಂದ್ರದಲ್ಲಿ ಅಧಿಕಾರ ಹಿಡಿಯುವುದು ಕಷ್ಟ ಎಂಬ ಮಾತುಗಳು ಕೇಳಿ ಬರುತ್ತಿವೆ. ನೋಟು ರದ್ದತಿ ಮತ್ತು ಜಿಎಸ್‌ಟಿ ಜಾರಿಯಾದ ಬಳಿಕ ದೇಶದಾದ್ಯಂತ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಎದ್ದಿದೆ. ಈ ಹಂತದಲ್ಲಿ ಬಿಜೆಪಿ ಸೇರುವುದನ್ನು ಕ್ಷೇತ್ರದ ಜನರೂ ಒಪ್ಪುವುದು ಕಷ್ಟ. ಒಂದು ವೇಳೆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದರೆ ಪುನಃ ಗೆಲ್ಲುವುದು ಸುಲಭವಿರಲಿಲ್ಲ ಎಂದೂ ಕಾಂಗ್ರೆಸ್‌ ನಾಯಕರೊಬ್ಬರು ತಿಳಿಸಿದರು.     

short by Pawan / more at Prajavani

Comments