Skip to main content


ಕೊಹ್ಲಿಗೆ ಲಕ್‌ ಆದ ಅನುಷ್ಕಾ ಜನ್ಮದಿನ; ಕೊನೆಗೂ ಸಿಕ್ತು ಆರ್‌ಸಿಬಿಗೆ ಗೆಲುವಿನ ಗಿಫ್ಟ್‌

ಐಪಿಎಲ್ ಟ್ವೆಂಟಿ-02 ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಂಬಯಿ ಇಂಡಿಯನ್ಸ್ ವಿರುದ್ಧ ನಡೆದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 14 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಕೊನೆಗೂ ಪತ್ನಿ ಅನುಷ್ಕಾ ಶರ್ಮಾ ಜನ್ಮದಿನದಂದು ವಿರಾಟ್ ಕೊಹ್ಲಿಗೆ ವಿಜಯಲಕ್ಷ್ಮಿ ಒಲಿದಿದೆ. ಇದರೊಂದಿಗೆ ಆರ್‌ಸಿಬಿ ಸಹ ಗೆಲುವಿನ ಟ್ರ್ಯಾಕ್‌ಗೆ ಮರಳಿದೆ. ಹಾಗೆಯೇ ಅನುಷ್ಕಾ ಸಾನಿಧ್ಯದಿಂದ ಬ್ಯಾಡ್ ಲಕ್ ಎದುರಾಗುತ್ತಿದೆ ಎಂಬ ಅಪವಾದಗಳಿಗೆ ಸ್ಪಷ್ಟ ಉತ್ತರ ಸಿಕ್ಕಿದೆ. ಇಲ್ಲಿ ಕೇವಲ 10 ಎಸೆತಗಳಲ್ಲಿ ಮೂರು ಸಿಕ್ಸರ್ ಸೇರಿದಂತೆ ಅಜೇಯ 23 ರನ್ ಗಳಿಸಿದ ಕಾಲಿನ್ ಡಿ ಗ್ರಾಂಡ್‌ಹೋಮ್ ಪ್ರದರ್ಶನವನ್ನು ವಿಶೇಷವಾಗಿ ಉಲ್ಲೇಖಿಸಬೇಕಾಗುತ್ತದೆ. ಅಲ್ಲದೆ ಕೊನೆಯ ಹಂತದಲ್ಲಿ ಆರ್‌ಸಿಬಿ ಬೌಲರ್‌ಗಳ ನಿಖರ ದಾಳಿ ಹಾಗೂ ಫೀಲ್ಡಿಂಗ್ ಪ್ರದರ್ಶನದ ಮೂಲಕ ಗೆಲುವಿನ ಹೋಮ್ ತಲುಪಿದೆ. ಈ ಗೆಲುವಿನೊಂದಿಗೆ ಆಡಿರುವ ಎಂಟು ಪಂದ್ಯಗಳಲ್ಲಿ ಮೂರನೇ ಗೆಲುವು ದಾಖಲಿಸಿರುವ ಆರ್‌ಸಿಬಿ ಆರು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಐದನೇ ಸ್ಥಾನಕ್ಕೇರಿದೆ.         



Short by Prajwal / more at Newspoint

Comments