Skip to main content


ನಿಫಾ ವೈರಸ್ ಸಾಂಕ್ರಾಮಿಕವಲ್ಲ, ಭಯಪಡಬೇಡಿ; ಕೇಂದ್ರ ಸರ್ಕಾರ

ಕೇರಳ ರಾಜ್ಯದಲ್ಲಿ 11ಮಂದಿಯನ್ನು ಬಲಿ ತೆಗೆದುಕೊಂಡಿರುವ ಮಾರಣಾಂತಿಕ ನಿಫಾ ವೈರಸ್ ಸಾಂಕ್ರಾಮಿಕ ರೋಗವಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಟಪಡಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಎಎನ್ ಐ ಜತೆ ಮಾತನಾಡುತ್ತ, ನಿಫಾ ವೈರಸ್ ಕುರಿತು ಭಾರತ ಸರ್ಕಾರ ತೀವ್ರ ನಿಗಾ ಇರಿಸಿದೆ. ನಮ್ಮ ವೈದ್ಯರ ತಂಡ ಸ್ಥಳದಲ್ಲಿದ್ದು, ಎಲ್ಲಾ ಮಾಹಿತಿ ಕಲೆ ಹಾಕುತ್ತಿದೆ ಎಂದು ಹೇಳಿದರು.

short by Pawan / more at Udayavani

Comments