Skip to main content


ಊಟ ಆದ ತಕ್ಷಣ ನೀರು ಕುಡಿದರೆ ಒಳ್ಳೆಯದೇ? ಈ ಗೊಂದಲಕ್ಕೆ ಇಲ್ಲಿದೆ ಉತ್ತರ

ಊಟ ಮಾಡುವ ಕೆಲವು ನಿಮಿಷಗಳ ಮೊದಲು ನೀರು ಕುಡಿಯುವುದು ಒಳ್ಳೆಯದಲ್ಲ ಎನ್ನುತ್ತಾರೆ ತಿಳಿದಂತವರು. ಹೀಗೆ ಊಟಕ್ಕೂ ಮುನ್ನ ನೀರು ಕುಡಿಯುವುದರಿಂದ ನಮ್ಮ ಜೀರ್ಣಕ್ರಿಯೆ ನಿಗದಿತ ಸಮಯಕ್ಕಿಂತ ಬೇಗನೆ ಆಗುತ್ತದೆ. ಇದರಿಂದ ಅಸಿಡಿಟಿ ಸಮಸ್ಯೆ ಹೆಚ್ಚುತ್ತದೆ ಎಂದು ತಜ್ಞರು ಹೇಳುತ್ತಾರೆ. ಇನ್ನು ಕೆಲವರು ಊಟದ ಜೊತೆ ಜೊತೆಯಾಗಿ ನೀರು ಕುಡಿಯುತ್ತಾರೆ. ಈ ರೀತಿ ಊಟದ ಜೊತೆ ನೀರು ಸೇವಿಸುವುದರಿಂದಲೂ ಅದು ಜೊಲ್ಲು ರಸ ಬಿಡುಗಡೆಗೆ ಅಡ್ಡಿ ಮಾಡುವುದರಿಂದ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಹಾಗಂತ ಊಟದ ತಟ್ಟೆ ಖಾಲಿ ಮಾಡಿದ ತಕ್ಷಣ ನೀರು ಸೇವಿಸುವುದರಿಂದಲೂ ಜೀರ್ಣಕ್ರಿಯೆಗೆ ಅಡ್ಡಿಯಾಗುತ್ತದಂತೆ. ಊಟವಾದ ಮೇಲೆ ಮೊದಲ ಹಂತದ ಜೀರ್ಣಕ್ರಿಯೆ ಮುಗಿಯಲು 30 ನಿಮಿಷ ಬೇಕಂತೆ, ಇದಾದ ಬಳಿಕ ನೀರು ಕುಡಿದರೆ ಉತ್ತಮ ಜೀರ್ಣಕ್ರಿಯೆಗೂ ಯಾವುದೇ ಸಮಸ್ಯೆಯಿಲ್ಲ ಎನ್ನುತ್ತಾರೆ ತಜ್ಞರು.        

short by Pawan / more at Webdunia

Comments