Skip to main content


ಚಾಲೆಂಜಿಂಗ್​ ಸ್ಟಾರ್​ಗೆ ಆ ನೆನಪು ಮಾಡಿಸಿದ್ದೇಕೆ ನಟ ಶರಣ್​!

ಬಾಲ್ಯ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಮಕ್ಕಳನ್ನು ನೋಡಿದಾಗೆಲ್ಲಾ ನಾವು ಮಕ್ಕಳಾಗಿಯೇ ಉಳಿದಿದ್ದರೆ ಎಷ್ಟು ಚೆನ್ನಾಗಿರುತಿತ್ತು. ಎನ್ನುವ ಆಸೆ ಮನಸ್ಸಿನಲ್ಲಿ ಹುಟ್ಟುತ್ತದೆ. ಈಗ ಯಾಕೆ ಈ ಮಾತು ಅಂದ್ರೆ ನಟ ಶರಣ್​, ದರ್ಶನ್​ ಅವರಿಗೆ ಬಾಲ್ಯದ ನೆನಪು ಮಾಡಿಸಿದ್ದಾರಂತೆ. ಹೌದು ಶರಣ್​, ಆಶಿಕಾ ರಂಗನಾಥ್​​ ಹಾಗು ಚಿಕ್ಕಣ್ಣ ಅಭಿನಯದ Rambo-2 ಸಿನಿಮಾ ಇತ್ತೀಚಿಗಷ್ಟೇ ಬಿಡುಗಡೆ ಯಾಗಕಿದೆ. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿರುವ Rambo-2 ಸಿನಿಮಾವನ್ನ ದರ್ಶನ್​ ಚಿತ್ರತಂಡದ ಜೊತೆ ಕೂತು ನೋಡಿದ್ದಾರೆ. ದರ್ಶನ್ ಸಿನಿಮಾ ಪೂರ್ತಿ ಮಕ್ಕಳಂತೆ ನಗುತ್ತಲೇ ಎಂಜಾಯ್ ಮಾಡಿದ್ದಾರೆ. ಶರಣ್ ಹಾಗೂ ಚಿಕ್ಕಣ್ಣ ಕಾಂಬಿನೇಷನ್ ಡಿ ಬಾಸ್ ಗೆ ತುಂಬಾ ಇಷ್ಟವಾಗಿದ್ಯಂತೆ. ರವಿಶಂಕರ್ ಅಭಿನಯಕ್ಕೆ ಮತ್ತೆ ಮಾರು ಹೋಗಿದ್ದಾರೆ. ಅಷ್ಟೇ ಅಲ್ಲದೆ ತೆರೆ ಹಿಂದೆ ಕೆಲಸ ಮಾಡಿರುವವರನ್ನು ದರ್ಶನ್ ಅಭಿನಂದಿಸಿದ್ದಾರೆ.    

short by Pawan / more at Bp9news

Comments