Skip to main content


ಹೇರ್ ಸ್ಪಾನಲ್ಲಿ ಶಾರುಕ್ ಪುತ್ರಿ ಮಾಡಿದ್ದೇನು ಗೊತ್ತಾ..?

ಬಾಲಿವುಡ್ ಬಾದ್ ಷಾ ಶಾರುಕ್ ಖಾನ್ ಮಕ್ಕಳಾದ ಆರ್ಯನ್ ಖಾನ್, ಸುಹಾನಾ ಖಾನ್ ಮತ್ತು ಅಬ್ರಾಹಂ ತಮ್ಮದೇ ಆದ ಅಭಿಮಾನಿಗಳನ್ನ ಹೊಂದಿದ್ದಾರೆ. ಇದಕ್ಕೆ ಅವರ ಗ್ಲಾಮರಸ್ ಪೋಷಕರಾದ ಶಾರುಕ್ ಮತ್ತು ಗೌರಿ ಖಾನ್ ಕೂಡಾ ಕಾರಣ ಇರಬಹುದು. ಆರ್ಯನ್ ಮತ್ತು ಸುಹಾನ ಸೋಶಿಯಲ್ ಮೀಡಿಯಾದಲ್ಲಿ ಅವರ ಫೋಟೋ, ವಿಡಿಯೋಗಳನ್ನು ಅಪ್ ಡೇಟ್ ಮಾಡ್ತಾ ತುಂಬಾ ಆಕ್ವಿವ್ ಆಗಿರ್ತಾರೆ. ಈ ಮಧ್ಯೆ ತನ್ನ ಶಾಲಾ ಗೆಳತಿಯರೊಂದಿಗೆ ಸ್ಪಾ ನಲ್ಲಿ ಟ್ರೀಟ್ ಮೆಂಟ್ ಪಡೆಯುತ್ತಿರೋ ವಿಡಿಯೋವನ್ನು ಸುಹಾನಾ ಅಪ್ ಲೋಡ್ ಮಾಡಿದ್ದಾರೆ. ಹೇರ್ ಸ್ಪಾನಲ್ಲಿ ಕ್ಯಾಶುವಲ್ ಔಟ್ ಫಿಟ್ ಧರಿಸಿರುವ ಸುಹಾನ ತನ್ನ ಸ್ನೇಹಿತೆಯರಿಗೆ ಸಹಾಯ ಮಾಡ್ತಿರೋದು, ಜೊತೆಗೆ ಅವರ ಸ್ಟ್ರೆಸ್ ಕಡಿಮೆ ಮಾಡುವಂತೆ ಸ್ಪಾ ನಲ್ಲಿರುವ ವ್ಯಕ್ತಿಗೆ ಹೇಳುತ್ತಿರುವುದು ವಿಡಿಯೋದಲ್ಲಿದೆ. ಇನ್ನು ಮೊನ್ನೆಯಷ್ಟೇ ಸುಹಾನ ಪಾರ್ಟಿಯೊಂದರಲ್ಲಿ ತನ್ನ ಸ್ನೇಹಿತರೊಂದಿಗೆ ಮ್ಯೂಸಿಕಲ್ ಚೇರ್ ಆಟವಾಡಿದ ವಿಡಿಯೋ ಅಪ್ ಲೋಡ್ ಮಾಡಿದ್ಲು. ಈ ವಿಡಿಯೋಗಳನ್ನ ನೋಡಿದ್ರೆ ತಿಳಿಯುತ್ತೆ ಶಾರುಕ್ ಪುತ್ರಿ ಬೇರೆಯವರನ್ನ ಹೇಗೆ ಖುಷಿಯಾಗಿಡಬೇಕು, ಅವರನ್ನ ಹೇಗೆ ಸಂತೋಷವಾಗಿಡಲು ಪ್ರಯತ್ನಿಸುತ್ತಾಳೆ ಅಂತ.         

short by Prajwal / more at Kannada Dunia

Comments