Skip to main content


ಬಹಳ ಸಮಯದ ಬಳಿಕ ಕೊಹ್ಲಿ ನಾಯಕತ್ವದ ಬಗ್ಗೆ ಮಾತನಾಡಿದ ಎಂ.ಎಸ್.ಧೋನಿ ಹೇಳಿದ್ದೇನು ಗೊತ್ತಾ..?

ಎಂ.ಎಸ್.ಧೋನಿ. ಕೂಲ್ ಕ್ಯಾಪ್ಟನ್.. ಭಾರತ ತಂಡವನ್ನ ಉತ್ತುಂಗ ಶಿಖರಕ್ಕೆ ಏರಿಸಿದ ಆಟಗಾರ ಕಮ್ ನಾಯಕ. ಧೋನಿ 2017 ರಲ್ಲಿ ತನ್ನ ನಾಯಕ ಸ್ಥಾನದಿಂದ ಕೆಳಗಿಳಿದ ಮೇಲೆ ಈತನ ಸ್ಥಾನವನ್ನ ತುಂಬಬಲ್ಲ ಅದೇ‌ ತೂಕದ ವ್ಯಕ್ತಿಯನ್ನ ಹುಡುಕಿದಾಗ‌ ಸಿಕ್ಕವರೆ ವಿರಾಟ್ ಕೊಹ್ಲಿ. ಕೊಹ್ಲಿ ಭಾರತ ತಂಡ ಕಂಡ ಅತೀ ಶ್ರೇಷ್ಠ ಆಟಗಾರ .. ಕೂಲ್ ಕ್ಯಾಪ್ಟನ್ ನಂತರ ಭಾರತ ತಂಡವನ್ನ ಮುನ್ನಡೆಸಿದ ಅಗ್ರೆಸಿವ್ ಆಟಗಾರ .. ವಿರಾಟ್ ಕ್ಯಾಪ್ಟನ್ ಆದ ಬಳಿಕ ಇಂಡಿಯಾ ಟೀಮ್ ನ ಜಯದ ಯಾನ ಹಾಗೆ ಮುಂದುವರೆದಿದೆ. ಇನ್ನೂ ಖಾಸಗಿ‌ ಕಾರ್ಯಕ್ರಮದಲ್ಲಿ ವಿರಾಟ್ ಬಗ್ಗೆ ಕೇಳಲಾದ ಪ್ರಶ್ನೆಗೆ ಧೋನಿ ತಮ್ಮದೇ ಶೈಲಿಯಲ್ಲಿ ತಮ್ಮ ಅವಲೋಕನದ ಮೂಲಕ ಉತ್ತರ ನೀಡಿದ್ದಾರೆ. ಕೊಹ್ಲಿ ನಾಯಕನ ಸ್ಥಾನಕ್ಕೆ ಹೇಳಿ ಮಾಡಿಸಿದ ಒಬ್ಬ ಆದರ್ಶ ವ್ಯಕ್ತಿ ಅಂದಿದ್ದಾರೆ. ನಾಯಕತ್ವದ ಮೊದಲ ಗುಣ ತನ್ನ ಪ್ರತಿಯೊಬ್ಬ ಸಹ ಆಟಗಾರರ ಬಗ್ಗೆ ತಿಳಿದಿರಬೇಕು .. ಯಾಕಂದ್ರೆ ಯಾವ ಆಟಗಾರನಲ್ಲಿ ಯಾವ ರೀತಿ ಸಾಮರ್ಥ್ಯ ಅಡಗಿದೆ ಅನ್ನೋದು ಗೊತ್ತಾಗ ಬೇಕಾದ್ರೆ ಅವರ ಬಗ್ಗೆ ತಿಳಿಯುವುದು ಅತೀ ಮುಖ್ಯ .. ಹೀಗಾದ್ರೆ ಮಾತ್ರ ಬೇಕಾದ ಸಲಹೆಯನ್ನ ನೀಡಲು ಸಾಧ್ಯ . ಜೊತೆಗೆ ನಾಯಕನಾದವನು ತನ್ನ ತಂಡದೊಂದಿಗೆ ಹೇಗೆ ಬೆರೆಯುತ್ತಾನೆ ಅನ್ನೋದು ಸಹ ಅತೀ ಮುಖ್ಯವಾಗುತ್ತೆ .. ಈ ವಿಚಾರಗಳಲ್ಲಿ ವಿರಾಟ್ ಇದ್ದಾರೆ ಅಂದಿದ್ದಾರೆ.      

short by Pawan / more at Vahini Tv

Comments