Skip to main content


CSK vs KKR ಫೈನಲ್ ಆಡಲಿವೆ ಎನ್ನುವ ಪ್ರೊಮೊ ಬಿಟ್ಟ ಹಾಟ್ ಸ್ಟಾರ್! ಸೋಶಿಯಲ್ ಮೀಡಿಯಾದ ಶುರುವಾಯ್ತು IPL ಫಿಕ್ಸಿಂಗ್ ಅನ್ನೋ ಅನುಮಾನ?

ಚೆನ್ನೈ ಸೂಪರ್ ಕಿಂಗ್ಸ್ ಟೀಮ್ ಈಗಾಗ್ಲೇ ಐಪಿಎಲ್ ಆವೃತ್ತಿಯ ಫೈನಲ್ ತಲುಪಿದೆ.. ಇನ್ನೂ ಇಂದು ನಡೆಯಲಿರುವ ಮ್ಯಾಚ್ ನಲ್ಲಿ ಯಾವ ಟೀಮ್ ಚೆನ್ನೈನನ್ನ ಎದುರಿಸಲಿದೆ ಅನ್ನೋ ಬಗ್ಗೆ ತಿಳಿಬೇಕಿದೆ.. ಹೀಗಾಗೆ SRH ಹಾಗೂ KKR ಎದುರಾಗುತ್ತಿದ್ದು, ಇಂದು ಗೆದ್ದ ಟೀಮ್ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗೆ ಮುಖಾಮುಖಿಯಾಗಲಿವೆ .  ಆದರೆ ಈ ಮ್ಯಾಚ್ ನಡೆಯುವುದಕ್ಕೂ ಮುನ್ನವೆ ಹಾಟ್ ಸ್ಟಾರ್ ನವರು ಪ್ರೊಮೊ ರಿಲೀಸ್ ಮಾಡಿ ಎಡವಟ್ಟು ಮಾಡಿದ್ದಾರೆ .  ಅದರಲ್ಲಿ ಚೆನ್ನೈ ಹಾಗೂ ಕೊಲ್ಕತ್ತಾ ತಂಡಗಳು ಪೈನಲ್ ನಲ್ಲಿ ಮುಖಾಮುಖಿಯಾಗಲಿವೆ ಅಂತ ಇದೆ .. ಈಗ ಇದೇ ಚರ್ಚೆಯ ಕೇಂದ್ರವಾಗಿದ್ದು , ಮ್ಯಾಚ್ ನಡೆಯುವ ಮೊದಲೇ ವಿನ್ನರ್ ಯಾರು ಅಂತ ಹಾಟ್ ಸ್ಟಾರ್ ಗೆ ಹೇಗೆ ಗೊತ್ತಾಯ್ತು .. ಈ ಪ್ರೊಮೊ ನೋಡಿದ್ರೆ ಐಪಿಎಲ್ ಫಿಕ್ಸಿಂಗ್ ಅಲ್ಲದೇ ಮತ್ತೇನು ಅಲ್ಲ ಅಂತ ಸಮಾಜಿಕ ಜಾಲತಾಣಾದ ಟ್ವಿಟರ್ ನಲ್ಲಿ ಮಾತುಗಳು ಕೇಳಿ ಬರ್ತಿವೆ .  ಈ ವಿಚಾರಕ್ಕೆ ಸಂಬಂಧಿಸಿದಂತೆ ಹಾಟ್ ಸ್ಟಾರ್ ಸಹ ತನ್ನ ಅಭಿಪ್ರಾಯ ವನ್ನ ತಿಳಿಸಿದ್ದು , ನಾವು ಚೆನ್ನೈ ವಿರುದ್ದ ಕೊಲ್ಕತ್ತಾ ಹಾಗೂ ಸನ್ ರೈಸರ್ಸ್ ಎರಡು ತಂಡಗಳಲ್ಲಿ ಒಂದು ಆಯ್ಕೆ ಆಗುವುದು ಖಚಿತವಾಗಿರುವುದರಿಂದ ಎರಡು ಪ್ರೊಮೊಗಳನ್ನ ಸಿದ್ದ ಮಾಡುತ್ತಿದ್ವಿ .. ಒಂದು ಕೊಲ್ಕತ್ತಾ ವಿರುದ್ದ ಹಾಗೆ ಸನ್ ರೈಸರ್ಸ್ ವಿರುದ್ದ ಅಂತ ..  ಆದರೆ ಇದಕ್ಕೆ‌ ತೀರ್ವ ವಿರೋಧ ವ್ಯಕ್ತವಾಗುತ್ತಿದಂತೆ ತಾನು‌ ಅಪ್ ಲೋಡ್ ಮಾಡಿದ ಫೈನಲ್ ಮ್ಯಾಚ್ ಪ್ರೊಮೊವನ್ನ ಡಿಲೀಟ್ ಮಾಡಿದೆ . ಈಗಾಗ್ಲೇ ಐಪಿಎಲ್ ಮೇಲೆ ಫಿಕ್ಸಿಂಗ್ ಅನ್ನೋ ನೆರಳು ಕಾಡುತ್ತಿದ್ದು , ಈ ರೀತಿಯ ಎಡವಟ್ಟುಗಳಾದ್ರೆ ಕ್ರಿಕೆಟ್ ಅಭಿಮಾನಿಗಳಲ್ಲಿ ಮತ್ತಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಂತೆಯೆ ಆಗುತ್ತೆ ಅಲ್ವಾ ..?

short by Nithin / more at VahiniTv

Comments