Skip to main content


RCB ಪ್ಲೇ ಆಫ್ ನಿಂದ ಔಟಾ..? ಇನ್ನೂ ಚಾನ್ಸ್ ಇದ್ಯಾ..? ಇಲ್ಲಿದೆ ನೋಡಿ ಡಿಟೇಲ್ಸ್..!

ಈ ಬಾರಿ‌ ಐಪಿಎಲ್ ಶುರುವಾಗಿನಿಂದಲೂ ಬೆಂಗಳೂರು ತಂಡದ ಮೇಲೆ ಇನ್ನಿಲ್ಲದ ನಿರೀಕ್ಷೆಗಳು ಇದ್ವು.. ಆದರೆ ಆರ್ ಸಿಬಿ ಕಳೆದ ಬಾರಿಯಂತೆ ಈ ಬಾರಿಯೂ ಕಳಪೆ ಆಟದಿಂದಾಗಿ ಪ್ಲೇ ಆಫ್ ಕನಸಿಗೆ ಭಾಗಶಃ ತೀಲಾಂಜಲಿ ಇಟ್ಟುಬಿಟ್ಟಿದೆ.. ನಿನ್ನೆ ನಡೆದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಮ್ಯಾಚ್ ನಲ್ಲಿ ಆರ್ ಸಿಬಿ ಗೆದಿದ್ರೆ ಪ್ಲೇ ಆಫ್ ಗೆ ಹೋಗುವ ಬಗ್ಗೆ ಹೆಚ್ಚು ಚರ್ಚೆಗಳು ಆಗುತ್ತಿರಲಿಲ್ಲ.. ಆದರೆ ಈಗ ಪರಿಸ್ಥಿತಿ‌ ಮತ್ತಷ್ಟು ಕಠಿಣವಾಗಿದೆ. ಆರ್ ಸಿಬಿಗೆ ಪ್ಲೇ ಆಫ್ ಗೆ ಏರಲು ಇನ್ನೂ ತುಂಬಾನೇ ಅವಕಾಶಗಳಿವೆ.. ಯಾಕಂದ್ರೆ ಬೆಂಗಳೂರು ತಂಡ ಇನ್ನೂ 5 ಮ್ಯಾಚ್ ಗಳನ್ನ ಆಡಲಿದೆ . ಆ 5 ಮ್ಯಾಚ್ ಗಳನ್ನ ಆರ್ ಸಿಬಿ ಗೆದಿದ್ದೆ ಆದ್ರೆ ಒಟ್ಟು 8 ಮ್ಯಾಚ್ ಗಳನ್ನ ತನ್ನದಾಗಿಸಿಕೊಂಡ ಹಾಗೆ ಆಗುತ್ತೆ . ಅಲ್ಲಿಗೆ ಆರ್ ಸಿಬಿಗೆ ಸಿಗಲಿದೆ 16 ಅಂಕಗಳು . ಹೀಗೇನಾದ್ರು ಆಗಿಬಿಟ್ರೆ ಆರ್ ಸಿಬಿ ಹಾಗೆ ಅಭಿಮಾನಿಗಳ ಪ್ಲೇ ಆಫ್ ಕನಸು ಜೀವಂತವಾಗುತ್ತೆ . ಇನ್ನೂ ಬರೀ ಮ್ಯಾಚ್ ಗೆಲ್ಲೋದು ಮಾತ್ರವಲ್ಲ , ಬೇರೆ ಟೀಮ್ ಗಳು ಸೋಲೋದನ್ನ ಆರ್ ಸಿಬಿ ಬಯಸಬೇಕಿದೆ .. ಹೌದು ಈಗಾಗ್ಲೇ 3 ಹಾಗೆ 4 ನೇ ಸ್ಥಾನದಲ್ಲಿರುವ ಪಂಜಾಬ್ ಹಾಗೆ ಕೊಲ್ಕತ್ತಾ ಸೋಲಬೇಕಿದೆ .. ಜೊತೆಗೆ ರಾಜಸ್ಥಾನ ಸಹ. ಮುಂಬೈ ಗೆದ್ರು ಆರ್ ಸಿಬಿಯ ಪ್ಲೇ ಆಫ್ ಕನಸಿಗೆ ಅಡ್ಡಯಾಗುವುದಿಲ್ಲ ಅನ್ನೋ ನಿರೀಕ್ಷೆ ಇದೆ .         

short by Prajwal / more at Vahini TV

Comments