Skip to main content


RCB ಗೆ ಮತ್ತೊಂದು ಅಘಾತ..! ಇಬ್ಬರು ಸ್ಟಾರ್ ಆಟಗಾರರು ತವರಿಗೆ ವಾಪಸ್..!?

ಈ ಬಾರಿಯ ಐಪಿಎಲ್ ನಲ್ಲಿ ಆರ್ ಸಿಬಿ, ದೆಲ್ಲಿ ಡೇರ್ ಡೆವಿಲ್ಸ್, ರಾಜಸ್ಥಾನ ರಾಯಲ್ಸ್, ಮುಂಬೈ ಇಂಡಿಯನ್ಸ್, ಕಡೆಯ 4 ಸ್ಥಾನಗಳಲ್ಲಿದ್ದು , ಈ ಬಾರಿಯ ಐಪಿಎಲ್ ನಲ್ಲಿ ಕಳಪೆ ಪ್ರದರ್ಶನದ ಮೂಲಕ ಹೊರ ಬೀಳಲಿರುವ ತಂಡಗಳ ಲೀಸ್ಟ್ ನಲ್ಲಿ ಕುಳಿತು ಬಿಟ್ಟಿವೆ. ಇನ್ನೂ ಆರ್ ಸಿಬಿ ವಿಚಾರಕ್ಕೆ ಬರೋದಾದ್ರೆ ವಿಶ್ವದ ಶ್ರೇಷ್ಠ ಆಟಗಾರರನ್ನ ಒಳಗೊಂಡಿರುವ ಈ ತಂಡ‌ ಸಹ ಗೆಲುವಿಗಾಗಿ ಪರದಾಡುವ ಪರಿಸ್ಥಿಯಲ್ಲಿದೆ. ಈ ನಡುವೆ ವಿದೇಶ ಆಟಗಾರರ ಪೈಕಿ ಬೌಲರ್ ಕ್ರಿಸ್ ಓಕ್ಸ್ ಹಾಗೆ ಕಳೆದ‌ ಮ್ಯಾಚ್ ನ ಮೂಲಕ‌ ಆರ್ ಸಿಬಿ ಪರ ಮೊದಲ ಬಾರಿಗೆ ಆಡಿದ ಆಲ್ ರೌಂಡರ್ ಮೊಯಿನ್ ಅಲಿ ತಮ್ಮ ತವರಿಗೆ ವಾಪಸ್ ಆಗಲಿದ್ದಾರೆ .. ಈ ಇಬ್ಬರು ಇಂಗ್ಲೀಷ್ ಪ್ಲೇಯರ್ ಗಳು ತಮ್ಮ ತವರಿನಲ್ಲಿ‌ ನಡೆಯಲಿರುವ ಟೂರ್ನಿಯಲ್ಲಿ ಪಾಲ್ಗೊಳ್ಳ ಬೇಕಾಗಿರುವುದರಿಂದ ವಾಪಸ್ ಹೋಗಲಿದ್ದಾರೆ . ಇಂಗ್ಲೆಂಡ್ ಪಾಕಿಸ್ತಾನ ವಿರುದ್ದ ಮೇ 24 ರಿಂದ ಎರಡು ಟೆಸ್ಟ್ ಮ್ಯಾಚ್ ಗಳನ್ನ ಆಡಲಿದೆ .. ಹೀಗಾಗೆ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ ತಮ್ಮ ಆಟಗಾರರನ್ನ ಟೂರ್ನಿ ಶುರುವಾಗುವ ಒಂದು ವಾರ ಮೊದಲೇ ತಂಡ ಕೂಡಿ ಕುಳುವಂತೆ ತಳಿಸಿದೆ. ಹೀಗಾಗೆ ಈ ಇಬ್ಬರು ಆಟಗಾರರು ಮೇ 17 ರಂದು ಇಂಗ್ಲೆಂಡ್ ಗೆ ವಾಪಾಸ್ ಹೋಗಲಿದ್ದಾರೆ.           

short by Prajwal / more at VahiniTV

Comments