Skip to main content


12 ಗಂಟೆಯೊಳಗೆ ನಿಪಾ ವೈರಾಸ್ ನಿಯಂತ್ರಣ - ಜೆ. ಪಿ. ನಡ್ಡಾ

ಕಳೆದ ತಿಂಗಳು ಕೇರಳದಲ್ಲಿ ಮರಣ ಮೃದಂಗ ಬಾರಿಸಿದ್ದ ನಿಪಾ ವೈರಸ್ ನಿಯಂತ್ರಣಕ್ಕೆ ಬಂದಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆ. ಪಿ. ನಡ್ಡಾ ಹೇಳಿದ್ದಾರೆ. ನಿಪಾ ವೈರಸ್ ಕಾಣಿಸಿಕೊಂಡ 12 ಗಂಟೆಯೊಳಗೆ ಡಾಕ್ಟರ್ ಗಳನ್ನೊಳಗೊಂಡ ತಂಡ ಕೇರಳಕ್ಕೆ ತಲುಪಿ ಸೋಂಕು ನಿಯಂತ್ರಣದ ಬಗ್ಗೆ ಚರ್ಚಿಸಿ, ಕಾಲಮಿತಿಯೊಳಗೆ ನಿಯಂತ್ರಣಕ್ಕೆ ತಂದಿದ್ದಾರೆ. ಪರಿಸ್ಥಿತಿಯನ್ನು ತಾವೇ ಖುದ್ದು ಮೇಲ್ವಿಚಾರಣೆ ನಡೆಸಿದ್ದು, ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಮಾನವ ಹಾಗೂ ಪ್ರಾಣಿಗಳಿಂದ ಈ ಸೋಂಕು ಹರಡಿ, ಜ್ವರ, ತಲೆನೋವು, ಉಸಿರಾಟ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ನಂತರ ಕೋಮ ಸ್ಥಿತಿಗೆ ತಲುಪಿ ಮನುಷ್ಯ ಸಾಯಲೂಬಹುದು.

short by Shraman / more at Kannada Prabha

Comments