Skip to main content


15 ದಿನಗಳಲ್ಲಿ ಹೊಸ ಬಜೆಟ್‌

ರಾಜ್ಯದಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರ ರಚನೆಯಾಗಿರುವುದರಿಂದ ಹೊಸ ಬಜೆಟ್‌ ಮಂಡಿಸಲು ನಿರ್ಧರಿಸಿದ್ದು, ಇನ್ನು 15 ದಿನಗಳಲ್ಲಿ ಬಜೆಟ್‌ ಮಂಡಿಸಲು ಯೋಚಿಸಲಾಗಿದೆ ಎಂದು ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಬಜೆಟ್‌ ಮಂಡನೆ ಜತೆಗೆ ಈಗಾಗಲೇ ಹೇಳಿ ರುವ ರೈತರ ಸಾಲ ಮನ್ನಾ, ನೀರಾವರಿ ಯೋಜನೆ ಗಳಿಗೆ ಆದ್ಯತೆ ಸೇರಿದಂತೆ ಅನೇಕ ವಿಚಾರಗಳು ತಮ್ಮ ಮುಂದಿದ್ದು, ಇವೆಲ್ಲವನ್ನೂ ಪರಾಮರ್ಶಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.

short by Shraman / more at Udayavani

Comments