Skip to main content


15 ವರ್ಷದ ನಂತ್ರ ಮತ್ತೆ ಡಿ ಬಾಸ್ ಜೊತೆ ಅಮೂಲ್ಯ

ಹೌದು ಸಣ್ಣ ಬ್ರೇಕ್ ನಂತರ ಅಮೂಲ್ಯ ಸಿನಿಮಾದಲ್ಲಿ ಅಭಿನಯಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ವಿಶೇಷ ಎಂದರೆ ಅಮೂಲ್ಯ ಮತ್ತೆ ದರ್ಶನ್ ಜೊತೆಯಲ್ಲಿ ಅಭಿನಯ ಮಾಡುತ್ತಿದ್ದಾರೆ. ನಟಿ ಅಮೂಲ್ಯ ದರ್ಶನ್ ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಬ್ಯುಸಿ ಆಗಲಿದ್ದಾರೆ. ತಮಿಳಿನ ವೇದಾಳಂ ಚಿತ್ರವನ್ನ ಕನ್ನಡಕ್ಕೆ ರೀಮೆಕ್ ಮಾಡಲು ಮುಂದಾಗಿದ್ದು ಸಿನಿಮಾದಲ್ಲಿಯ ತಂಗಿ ಪಾತ್ರವನ್ನು ಅಮೂಲ್ಯ ನಿರ್ವಹಿಸಲಿದ್ದಾರಂತೆ. 15 ವರ್ಷದ ಹಿಂದೆ ದರ್ಶನ್ ಅಭಿನಯದ ಲಾಲಿ ಹಾಡು ಚಿತ್ರದಲ್ಲಿ ಅಮೂಲ್ಯ ಬಾಲ ನಟಿಯಾಗಿ ಕಾಣಿಸಿಕೊಂಡಿದ್ದರು. ಆದಾದ ನಂತರ ಒಟ್ಟಿಗೆ ಇಬ್ಬರೂ ಯಾವುದೇ ಸಿನಿಮಾದಲ್ಲಿ ಅಭಿನಯ ಮಾಡಿಲ್ಲ.     

short by Pawan / more at Filmibeat

Comments