Skip to main content


20 ದಿನ, ₹90 ಕೋಟಿ ಸಾಹೋ ದಾಖಲೆ!

ಮೂರು ಭಾಷೆಯಲ್ಲಿ ಅದ್ದೂರಿ ವೆಚ್ಚದಲ್ಲಿ ಸಿದ್ಧಗೊಳ್ಳುತ್ತಿರುವ ಪ್ರಭಾಸ್ ಅಭಿನಯದ ‘ಸಾಹೋ’ ಸಿನಿಮಾ ಮೇಕಿಂಗ್ ಹಂತದಲ್ಲೇ ಸದ್ದು ಮಾಡುತ್ತಿದೆ. ಈಗಾಗಲೇ ಅರ್ಧ ಭಾಗದ ಶೂಟಿಂಗ್ ಮುಗಿಸಿಕೊಂಡಿರುವ ‘ಸಾಹೋ’, ಇತ್ತೀಚೆಗೆ ಭರ್ಜರಿ ಆಕ್ಷನ್ ಸನ್ನಿವೇಶಗಳನ್ನೂ ಚಿತ್ರೀಕರಿಸಿಕೊಂಡು ಸುದ್ದಿಯಾಗಿದೆ. ಅಬುದಾಬಿಯಲ್ಲಿ ಬಿಟ್ಟುಬಿಡದೆ 20 ದಿನಗಳ ಒಂದೇ ಶೆಡ್ಯೂಲ್​ನಲ್ಲಿ ಸಾಹಸ ದೃಶ್ಯಗಳನ್ನು ಸೆರೆಹಿಡಿದಿದ್ದು, ಅದಕ್ಕಾಗಿ ಬರೋಬ್ಬರಿ 90 ಕೋಟಿ ರೂ. ವ್ಯಯಿಸಿದೆ ಚಿತ್ರತಂಡ.

ವಿಶೇಷ ಏನೆಂದರೆ, ಭಾರತೀಯ ಸಿನಿಮಾ ಇತಿಹಾಸದಲ್ಲೇ ಕೇವಲ 20 ದಿನಕ್ಕೆ 90 ಕೋಟಿ ರೂ. ಖರ್ಚು ಮಾಡಿದ ಏಕೈಕ ಸಿನಿಮಾ ಎಂಬ ಖ್ಯಾತಿಯೂ ‘ಸಾಹೋ’ ಮುಡಿಗೇರಿದೆ. ಬಹುತೇಕ ಈ ಸಾಹಸ ಸನ್ನಿವೇಶವನ್ನು ನೈಜವಾಗಿ ಸೆರೆಹಿಡಿದಿರುವುದರಿಂದಲೇ ಈ ಮಟ್ಟಿಗಿನ ಖರ್ಚಾಗಿದೆ ಎಂದೂ ಹೇಳಲಾಗುತ್ತಿದೆ. ಹಾಲಿವುಡ್ ಸ್ಟಂಟ್ ಮಾಸ್ಟರ್ ಕೆನ್ನಿ ಬೇಟ್ಸ್ ‘ಸಾಹೋ’ ಚಿತ್ರಕ್ಕೂ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ. ಅದಕ್ಕಾಗಿ 37 ಕಾರ್ ಮತ್ತು 5 ಟ್ರಕ್ ಬ್ಲಾಸ್ಟ್ ಮಾಡಲಾಗಿದೆ.  

short by Pawan!

Comments