Skip to main content


ಅನುಷ್ಕಾ ಕೀ ಚೈನ್ ಬೆಲೆ 20 ಸಾವಿರ ರೂ. !

ಹೌದು, ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಅನುಷ್ಕಾ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ಸಿಂಪಲ್ ಉಡುಗೆ ತೊಟ್ಟಿದ್ದ ಅನುಷ್ಕಾ, ಹೆಗಲಿಗೆ ಬ್ಯಾಗ್ ಹಾಕಿದ್ದರು. ಬ್ಯಾಗ್​ಗೆ ಹಾಕಿದ್ದ ಬ್ರಾ್ಯಂಡೆಡ್ ಕೀ ಚೈನ್​ಎಲ್ಲರ ಗಮನ ಸೆಳೆದಿದೆ. ಇದೇ ಮಾದರಿಯ ಕೀ ಚೈನ್ ಮೌಲ್ಯ ಪತ್ತೆ ಮಾಡಿದವರು ರೇಟ್ ಕಂಡು ಹೌಹಾರಿದ್ದಾರೆ. ಏಕೆಂದರೆ ಅದರ ಮೌಲ್ಯ, 305 ಡಾಲರ್. ಅದನ್ನು ರೂಪಾಯಿಗೆ ಬದಲಾಯಿಸಿದರೆ 20,840 ರೂ. ಆಗುತ್ತದೆ. ಈ ವಿಚಾರ ಟ್ವಿಟರ್​ನಲ್ಲಿ ಸದ್ಯ ಚರ್ಚೆಯಲ್ಲಿದೆ. ‘ಅನುಷ್ಕಾ ಕೀ ಚೈನ್ ಆಕರ್ಷಕವಾಗಿದೆ’ ಎಂದು ಕೆಲವರು ಪ್ರಶಂಸೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು, ಹಾಸ್ಯ ಚಟಾಕಿ ಹಾರಿಸಿದ್ದಾರೆ.     

short by Pawan / more at Vijayavani

Comments