Skip to main content


2019ರ ಅನೌಪಚಾರಿಕ ಶೃಂಗಸಭೆ ಭಾರತದಲ್ಲಿ: ಪ್ರಧಾನಿ ಮೋದಿ ಆಹ್ವಾನ ಒಪ್ಪಿದ ಚೀನಾ ಅಧ್ಯಕ್ಷ

2019ರಲ್ಲಿ ವುಹಾನ್ ಮಾದರಿಯ ಅನೌಪಚಾರಿಕ ಶೃಂಗಸಭೆಯನ್ನು ಭಾರತದಲ್ಲಿ ನಡೆಸೋಣ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನವನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಒಪ್ಪಿಕೊಂಡಿದ್ದಾರೆ. ಈ ವಿಚಾರವನ್ನು ಚೀನೀ ಅಧಿಕಾರಿಗಳು ಖಚಿತಪಡಿಸಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಪ್ರಕಟಿಸಿದ್ದಾರೆ. 

ಉಭಯ ದೇಶಗಳು 2020ರ ವೇಳೆಗೆ 10,000 ಕೋಟಿ ಡಾಲರ್‌ಗಳ ದ್ವಿಪಕ್ಷೀಯ ವ್ಯಾಪಾರದ ಗುರಿ ಹಾಕಿಕೊಳ್ಳೋಣ ಎಂದು ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲಹೆ ನೀಡಿದರು. ಈ ಮೊದಲು ಎರಡೂ ದೇಶಗಳು 2015ರ ವೇಳೆಗೆ 100 ಕೋಟಿ ಡಾಲರ್‌ಗಳ ದ್ವಿಪಕ್ಷೀಯ ವ್ಯಾಪಾರದ ಗುರಿ ನಿಗದಿಪಡಿಸಿದ್ದವು. 

ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ವಿಷಯಗಳ ಕುರಿತು ಕೆಲವು ಚರ್ಚೆಗಳು ನಡೆದವು. ಭಾರತದಿಂದ ಬಾಸ್ಮತಿಯೇತರ ಅಕ್ಕಿ ಮತ್ತು ಸಕ್ಕರೆ ಸಹಿತ ಕೃಷಿ ಉತ್ಪನ್ನಗಳ ರಫ್ತಿಗೆ ಚೀನಾದಿಂದ ಹೆಚ್ಚಿನ ಉತ್ತೇಜ ನೀಡಲಾಗುವುದು ಎಂದು ಅಧ್ಯಕ್ಷ ಕ್ಸಿ ಅವರು ಪ್ರಧಾನಿ ಮೋದಿ ಅವರಿಗೆ ಈ ಸಂದರ್ಭದಲ್ಲಿ ಭರವಸೆ ನೀಡಿದರೆಂದು ಗೋಖಲೆ ವಿವರಿಸಿದರು.    

short by Pawan / more at Vijayakarnataka

Comments