Skip to main content


ಈ ಐವರು ಪ್ಲೇಯರ್ಸ್‌‌ 2019ರ ವಿಶ್ವಕಪ್‌ನಲ್ಲಿ ಆಡುವುದು ಡೌಟ್‌!

ಈ ಮಧ್ಯೆ ಒಂದಾನೊಂದು ಕಾಲದಲ್ಲಿ ಟೀಂ ಇಂಡಿಯಾ ತಂಡದ ಆಧಾರಸ್ತಂಭವಾಗಿದ್ದ ಕೆಲ ಪ್ಲೇಯರ್ಸ್‌‌ 2019ರ ವಿಶ್ವಕಪ್‌ ಟೂರ್ನಿಯಿಂದ ಹೊರಬೀಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿವೆ. ಮೇ 30ರಿಂದ ಆರಂಭಗೊಳ್ಳಲಿರುವ ವಿಶ್ವಕಪ್‌ ಟೂರ್ನಿಯಲ್ಲಿ ಟೀಂ ಇಂಡಿಯಾ ಜೂನ್‌ 5ರಂದು ತನ್ನ ಮೊದಲ ಪಂದ್ಯ ಆಡಲಿದೆ. ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಲು ಫಿಟ್ನೆಸ್‌ ಪ್ರಮುಖ ಅಸ್ತ್ರವಾಗಿಟ್ಟುಕೊಂಡಿರುವ ಬಿಸಿಸಿಐ ಎಲ್ಲ ಆಟಗಾರರಿಗೂ ಯೋ-ಯೋ ಟೆಸ್ಟ್‌ ಕಡ್ಡಾಯಗೊಳಿಸಿದೆ. ಮೊಹಮ್ಮದ್‌ ಶಮಿ, ಯುವರಾಜ್‌ ಸಿಂಗ್‌, ಅಜಿಂಕ್ಯ ರಹಾನೆ, ಮನೀಷ್‌ ಪಾಂಡೆ ಮತ್ತೆ ರವಿಚಂದ್ರನ್‌ ಅಶ್ವಿನ್‌ ಆ ಟೆಸ್ಟ್ನಲ್ಲಿ  ಫೇಲ್‌ ಆಗಿರುವ ಕಾರಣ ಅವರು ಮುಂದಿನ ವಿಶ್ವಕಪ್‌ ತಂಡಕ್ಕೆ ಆಯ್ಕೆಗೊಳ್ಳುವುದು ಬಹುತೇಕ ಡೌಟ್‌ ಎಂದು ಹೇಳಲಾಗುತ್ತಿದೆ.  

short by Pawan / more at Eenadu India

Comments