Skip to main content


2021ಕ್ಕೆ ಬರುತ್ತಿದೆ ಮಾರುತಿ ವಿದ್ಯುತ್‌ ಕಾರು!?

ವಿದ್ಯುತ್‌ ಕಾರು ಉತ್ಪಾದನೆ ಬಗ್ಗೆ ದೇಶದಲ್ಲಿ ಚಟುವಟಿಕೆಗಳು ಬಿರುಸಾಗಿವೆ. ಮಾರುತಿ ಸುಜುಕಿ 2020-2021ನೇ ವಿತ್ತೀಯ ವರ್ಷದಿಂದ ವಿದ್ಯುತ್‌ ಕಾರುಗಳ ಉತ್ಪಾದನೆಗೆ ತೊಡಗಲಿದೆ. ಇತರ ಕಾರು ಉತ್ಪಾದಕ ಸಂಸ್ಥೆಗಳಾಗಿರುವ ಟಾಟಾ, ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಈ ನಿಟ್ಟಿನಲ್ಲಿ ಆರಂಭ ಮಾಡಿದ್ದರೂ, ಮಾರುತಿ ಸುಜುಕಿಯೇ ಮೊದಲು ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.

ಚಾರ್ಜ್‌ಗಾಗಿ ಬಳಕೆ ಮಾಡುವ ಲೀಥಿಯಂ- ಇಯಾನ್‌ ಬ್ಯಾಟರಿ ಉತ್ಪಾದಿಸುವ ಕಾರ್ಖಾನೆಯನ್ನು ಮೊದಲು ಆರಂಭಿಸಲು ಚಿಂತನೆ. ಬಳಿಕವೇ ಕಾರು ಉತ್ಪಾದನೆ ಮಾಡಲು ಕಂಪೆನಿಯ ಇರಾದೆ. ಸ್ಥಳೀಯವಾಗಿಯೇ ಉತ್ಪಾದಿಸಲಾಗುವ ಬ್ಯಾಟರಿಯನ್ನೇ ಹೊಂದಿರುವ ಮೊದಲ ವಿದ್ಯುತ್‌ ಕಾರುಗಳು ಎಂಬ ಹೆಗ್ಗಳಿಕೆಗೆ ಮಾರುತಿ ಸುಜುಕಿ ಪಾತ್ರವಾಗಲಿದೆ.   

short by Pawan / more at Udayavani


Comments