Skip to main content


ಬಜೆಟ್‍ನಲ್ಲಿ 2 ಹಂತಗಳ ಸಾಲ ಮನ್ನಾ ಘೋಷಣೆ ಸಾಧ್ಯತೆ

ಬ್ಯಾಂಕ್‍ಗಳಲ್ಲಿ ರೈತರು ಪಡೆದಿರುವ ಸಾಲವನ್ನು ಮನ್ನಾ ಮಾಡಲು ಮುಂದಾಗಿರುವ ರಾಜ್ಯ ಸರ್ಕಾರ ಎರಡು ಹಂತಗಳಲ್ಲಿ ಸಾಲ ಮನ್ನಾ ಮಾಡುವ ಘೋಷಣೆಯನ್ನು ಬಜೆಟ್‍ನಲ್ಲಿ ಪ್ರಕಟಿಸಲಿದೆ. ಜುಲೈ 5ರಂದು ಹಣಕಾಸು ಖಾತೆಯನ್ನು ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮೊದಲ ಹಂತದಲ್ಲಿ ಸಣ್ಣ , ಅತಿಸಣ್ಣ ರೈತರು ಸಹಕಾರಿ, ಸಾರ್ವಜನಿಕ ವಲಯ ಮತ್ತು ವಾಣಿಜ್ಯ ಬ್ಯಾಂಕ್‍ಗಳಲ್ಲಿ ಪಡೆದಿರುವ ಒಂದು ಲಕ್ಷದೊಳಗಿನ ಸಾಲವನ್ನು ಮನ್ನಾ ಮಾಡುವ ಯೋಜನೆಯನ್ನು ಘೋಷಿಸಲಿದ್ದಾರೆ.

2ನೇ ಹಂತದಲ್ಲಿ ರೈತರು ಜಮೀನು ಹೊಂದಿರದೆ ಬ್ಯಾಂಕ್‍ಗಳಲ್ಲಿ ಸಾಲ ಪಡೆದಿದ್ದರೆ ಮಾತ್ರ ಮನ್ನಾವಾಗಲಿದೆ. ಈ ಬಾರಿ ಸರ್ಕಾರದ ಸಾಲ ಮನ್ನಾ ಯೋಜನೆಯಲ್ಲಿ ಶ್ರೀಮಂತರು, ಆಸ್ತಿವಂತರು, ವ್ಯಾಪಾರ ವಹಿವಾಟು ನಡೆಸುವವರು, ನೌಕರರು ಹಾಗೂ ಹೆಚ್ಚು ಜಮೀನು ಹೊಂದಿರುವವರ ಸಾಲ ಮನ್ನಾ ಮಾಡಲು ಸರ್ಕಾರ ತೀರ್ಮಾನಿಸಿದೆ.   

short by Pawan / more at Eesanje

Comments