Skip to main content


ರೈತರಿಗೆ ಬಿಗ್ ಶಾಕ್: ಹಾಲಿನ ದರ 2ರೂ ಕಡಿತ

ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ನಾನಾ ಒಕ್ಕೂಟಗಳು ಹಾಲು ಉತ್ಪಾದಕರಿಂದ ಖರೀದಿಸವ ದರದಲ್ಲಿ ಲೀಟರ್ ಗೆ 2 ರೂ. ವರೆಗೆ ಕಡಿತ ಮಾಡಿದೆ. ರಾಜ್ಯದಲ್ಲಿ ಹಾಲಿನ ಉತ್ಪಾದನೆ ಹೆಚ್ಚಳ ಮಾಡಬೇಕೆಂದು ಸರ್ಕಾರ ಲೀಟರ್ 5 ರೂ. ಪ್ರೋತ್ಸಾಹಧನ ಕೊಡುತ್ತಿದೆ. ಆದರೆ ಹೆಚ್ಚು ಉತ್ಪಾದನೆಯಾದರೆ ಹಾಲು ನಿರ್ವಹಣೆ ಮಾಡುವುದು ಕಷ್ಟ ಎಂದು ಹಾಲು ಒಕ್ಕೂಟಗಳು ದರ ಇಳಿಕೆ ಮಾಡಿವೆ. ಆದರೆ, ಗ್ರಾಹಕರಿಗೆ ಮಾರಾಟ ಮಾಡುವ ಹಾಲಿ ದರ ಇಳಿಕೆಯಾಗವುದಿಲ್ಲ.

short by Shraman Jain / more at Kannada News Now

Comments