Skip to main content


ಹೊಸ ದಾಖಲೆ ಬರೆಯಲಿದೆ ಸುದೀಪ್ ಕೋಟಿಗೊಬ್ಬ-3

ಬಹುಕೋಟಿ ವೆಚ್ಚದಲ್ಲಿ ತಯಾರಾಗಲಿರುವ 'ಕೋಟಿಗೊಬ್ಬ-3' ಚಿತ್ರ, ಶೂಟಿಂಗ್ ಹಂತದಲ್ಲಿಯೇ ದಾಖಲೆ ಬರೆಯಲು ಸಜ್ಜಾಗಿದೆ. 'ಕೋಟಿಗೊಬ್ಬ-3' ಚಿತ್ರದ ಬಹುತೇಕ ಚಿತ್ರೀಕರಣ ವಿದೇಶದಲ್ಲಿಯೇ ನಡೆಯಲಿದೆ. ಹೀಗಾಗಿ 40 ದಿನಗಳ ಕಾಲ ಸರ್ಬಿಯಾದ ರಾಜಧಾನಿದಲ್ಲಿ 'ಕೋಟಿಗೊಬ್ಬ-3' ಚಿತ್ರದ 51 ಜನರ ತಂಡ ಠಿಕಾಣಿ ಹೂಡಲಿದೆ. ಹಾಗ್ನೋಡಿದ್ರೆ, ಸರ್ಬಿಯಾದಲ್ಲಿ ಚಿತ್ರೀಕರಣಗೊಳ್ಳುತ್ತಿರುವ ಮೊದಲ ಕನ್ನಡ ಚಿತ್ರ 'ಕೋಟಿಗೊಬ್ಬ-3'. ಯಾವುದೇ ಪರಭಾಷೆಯ ಚಿತ್ರಗಳಲ್ಲೂ ಸರ್ಬಿಯಾದ ಸುಂದರ ಪ್ರದೇಶಗಳನ್ನ ಅಷ್ಟಾಗಿ ತೋರಿಸಿಲ್ಲ. ಹೀಗಾಗಿ ಸರ್ಬಿಯಾದಲ್ಲೇ ಶೂಟಿಂಗ್ ಮಾಡಿ ದಾಖಲೆ ಬರೆಯಲು ನಿರ್ಮಾಪಕ ಸೂರಪ್ಪ ಬಾಬು ಮುಂದಾಗಿದ್ದಾರೆ.    

short by Pawan / more at Filmibeat

Comments