Skip to main content


ಮೋದಿ ವಿದೇಶ ಪ್ರವಾಸ ವೆಚ್ಚ 377 ಕೋಟಿ ರೂ.

ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸ ವೆಚ್ಚ 43 ತಿಂಗಳಲ್ಲಿ 377 ಕೋಟಿ ರೂ.ಗಳಾಗಿದೆ. ಮೋದಿ ಅಧಿಕಾರಕ್ಕೆ ಬಂದ 2014ರ ಜೂನ್‌ನಿಂದ 2018ರ ಜನವರಿವರೆಗಿನ ವಿದೇಶಿ ಪ್ರವಾಸ ವೆಚ್ಚ ವಿವರವನ್ನು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಪಡೆದುಕೊಂಡಿದ್ದು, ಒಟ್ಟು 377,67,17,465 ರೂ.ಗಳಾಗಿದೆ. ಪ್ರಧಾನಿ 43 ತಿಂಗಳಲ್ಲಿ ಒಟ್ಟು 165 ದಿನಗ ಕಾಲ ವಿದೇಶಿ ಪ್ರವಾಸ ಮಾಡಿದ್ದು, 52 ರಾಷ್ಟ್ರಗಳಿಗೆ ಭೇಟಿ ನೀಡಿದ್ದಾರೆ. ಫ್ರಾನ್ಸ್‌, ಜರ್ಮನಿ, ಕೆನಡಾ ರಾಷ್ಟ್ರಗಳಿಗೆ 9 ದಿನಗಳ ಪ್ರವಾಸ ಮಾಡಿದ್ದು, 32,25,78,000 ರೂ. ವೆಚ್ಚವಾಗಿದೆ. ಭೂತಾನ್‌ 2 ದಿನ ಭೇಟಿ ವೇಳೆ 2,45,27,465 ರೂ. ವೆಚ್ಚವಾಗಿರುವುದು ಮಾಹಿತಿಯಿಂದ ತಿಳಿದು ಬಂದಿದೆ.    

short by Pawan!

Comments