Skip to main content


ಕೋಟಿಗೊಬ್ಬ 3 ಚಿತ್ರಕಥೆಯ ಸುಳಿವು ಬಿಟ್ಟುಕೊಟ್ಟ ಸುದೀಪ್‌!

ಹೌದು, 'ಕೋಟಿಗೊಬ್ಬ 2' ಚಿತ್ರದಲ್ಲಿ ಅಬ್ಬರಿಸಿದ್ದ ಸುದೀಪ್‌, ಈಗ 'ಕೋಟಿಗೊಬ್ಬ 3' ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಕೆಲಸಗಳು ಪ್ರಾರಂಭಗೊಂಡಿವೆ. ಇದೇ 17 ರಂದು ಸರ್ಬಿಯಾದ ಬೆಲ್‌ಗ್ರೇಡ್‌‌ ಎಂಬಲ್ಲಿ ಈ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದೆ. ಈಗಾಗಲೇ ಸುದೀಪ್‌ ಬೆಲ್‌ಗ್ರೇಡ್‌ಗೆ ಹಾರಿದ್ದಾರೆ. ಈ ವಿಷಯವನ್ನು ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸುದೀಪ್‌, ಈ ಚಿತ್ರದ ಚಿತ್ರಕಥೆಯ ಸುಳಿವನ್ನು ಬಿಟ್ಟುಕೊಟ್ಟಿದ್ದಾರೆ. 'ಶಿವನನ್ನು ಮರುಸೃಷ್ಟಿಸಲು ಮತ್ತೆ ಕಾಲ ಕೂಡಿಬಂದಿದೆ'. ಎನ್ನುವ ಮೂಲಕ ಇದು 'ಕೋಟಿಗೊಬ್ಬ2' ಚಿತ್ರದ ಮುಂದುವರೆದ ಭಾಗ ಎಂದು ಹೇಳಿದ್ದಾರೆ.      

short by Pawan!

Comments