Skip to main content


ಕಿಚ್ಚನ ಕೋಟಿಗೊಬ್ಬ 3 ಚಿತ್ರದಲ್ಲಿ ಎಷ್ಟು ನಟಿಯರು?

'ಕೋಟಿಗೊಬ್ಬ 3' ಚಿತ್ರಕಥೆಯ ಸಣ್ಣ ಎಳೆ ಕೂಡ ಗೊತ್ತಾಗಿದೆ. ಇದು ಕೋಟಿಗೊಬ್ಬ 2 ಚಿತ್ರದ ಮುಂದುವರೆದ ಭಾಗವೆಂದು ಸುದೀಪ್ ಅವರೇ ಹೇಳಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದಲ್ಲಿಯ ತಾರಾಬಳಗ ಸಿದ್ಧವಾಗಿದ್ದು, ಇದೀಗ ಮತ್ತೊಬ್ಬರು ಸೇರ್ಪಡೆಯಾಗಿದ್ದಾರೆ. 

'ಕೋಟಿಗೊಬ್ಬ 3' ಚಿತ್ರದಲ್ಲಿ ನಟ ಅಫ್‍ತಾಬ್ ಶಿವದಾಸಾನಿ, ನವಾಬ್ ಶಾ ಹಾಗೂ ನಟಿ ಮಡೋನ್ನ ಸೆಬಾಸ್ಟಿಯನ್ ನಟಿಸಿಲಿದ್ದಾರೆ. ಈಗ ಶ್ರದ್ಧಾ ದಾಸ್ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಚಿತ್ರದಲ್ಲಿ ಇವರ ಪಾತ್ರ ಏನು ಎಂಬುದನ್ನ ಅವರೇ ಹೇಳಿಕೊಂಡಿದ್ದಾರೆ. 

ಈ ಚಿತ್ರದಲ್ಲಿ ಅವರು ಇಂಟರ್‌ಪೋಲ್ ಅಧಿಕಾರಿ ಪಾತ್ರ ನಿಭಾಯಿಸುತ್ತಿದ್ದಾರಂತೆ. ಸುದೀಪ್ ಪಾತ್ರದ ಹಿಂದೆ ಬೀಳುವ ರೋಲ್‌ನಲ್ಲಿ ಕಾಣಿಸಲಿದ್ದಾರೆ. ಯೂರೋಪ್‌ನಲ್ಲಿ ಚಿತ್ರೀಕರಣ ನಡೆಯಲಿದ್ದು, ಸುದೀಪ್‌ ಜತೆ ನಟಿಸಲು ತುಂಬ ಎಕ್ಸೈಟ್‌ ಆಗಿದ್ದೇನೆ ಎನ್ನುತ್ತಾರೆ ದಾಸ್‌‌.     

short by Pawan / more at Eenadu India

Comments