Skip to main content


ಒಂದೇ ದಿನದಲ್ಲಿ 3 ಲಕ್ಷ ಗಡಿ ತಲುಪಿದ ಅವನೇ ಶ್ರೀಮನ್ನಾರಾಯಣ ಟೀಸರ್

ರಕ್ಷಿತ್ ಶೆಟ್ಟಿ ಅಭಿನಯದ ಮತ್ತೊಂದು ಮಹಾತ್ವಾಕಾಂಕ್ಷಿ ಚಿತ್ರ 'ಅವನೇ ಶ್ರೀಮನ್ನಾರಾಯಣ,'. ಈ ಚಿತ್ರದ ಫಸ್ಟ್ ಲುಕ್ ರಕ್ಷಿತ್ ಹುಟ್ಟುಹಬ್ಬದ ದಿನ ಬಿಡುಗಡೆಯಾಗಿ ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಸಖತ್ ಕ್ರೇಜ್ ಹುಟ್ಟಿಸಿದೆ. ಅದೇ ದಿನ ಬಿಡುಗಡೆಯಾದ ಚಿತ್ರದ ಟೀಸರ್ ಸಹ ಯೂಟ್ಯೂಬಲ್ಲಿ 3 ಲಕ್ಷ ಕ್ಲಿಕ್ಸ್‌ ಗಡಿ ತಲುಪಿದೆ. ಈ ಟೀಸರ್‌ಗೆ 17 ಸಾವಿರ ಮಂದಿ ಥಂಬ್ಸ್ ಅಪ್ ಒತ್ತಿದ್ದರೆ, ಕೇವಲ 312 ಮಂದಿ ಥಂಬ್ಸ್ ಡೌನ್ ತೋರಿಸಿದ್ದಾರೆ. ಟೀಸರ್ ನೋಡಿ 900ಕ್ಕೂ ಹೆಚ್ಚು ಕಾಮೆಂಟ್‌ಗಳು ಹರಿದುಬಂದಿವೆ. ಸಿನಿಮಾ ಬಹುಶಃ ಡಿಸೆಂಬರ್‌ನಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ. 

short by Shraman / more at Vijaya Karnataka


Comments