Skip to main content


ರಚಿತಾ ನಟಸಾರ್ವಭೌಮ ಹೀರೋಯಿನ್ – ಚಿತ್ರದ ಶೇ.45ರಷ್ಟು ಶೂಟಿಂಗ್ ಕಂಪ್ಲೀಟ್

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಚಿತ್ರ ನಟಸಾರ್ವಭೌಮದಲ್ಲಿ ರಚಿತಾರಾಮ್ ಅವರೇ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ರಚಿತಾ ರಾಮ್ ಅಭಿನಯದ ಶೂಟಿಂಗ್ ಬಹುಪಾಲು ಮುಗಿದಿದೆ. ಇನ್ನೂ ವಿಶೇಷ ಏನಪ್ಪಾ ಅಂದ್ರೆ ರಚಿತಾ ರಾಮ್ ಜೊತೆ ಈ ಚಿತ್ರದಲ್ಲಿ ಇನ್ನೊಬ್ಬರು ನಾಯಕಿಯೂ ಇದ್ದಾರಂತೆ. ಈ ಹೀರೋಯಿನ್ ಹೆಸರು ಫೈನಲ್ ಆಗಿದೆಯಂತೆ. ಆದರೆ ಚಿತ್ರತಂಡ ಈ ನಟಿಯ ಹೆಸರನ್ನು ಬಹಿರಂಗಪಡಿಸಿಲ್ಲ. ಈಗಾಗಲೇ ಚಿತ್ರದ ಶೇ.45ರಷ್ಟು ಭಾಗದ ಶೂಟಿಂಗ್ ಮುಗಿದಿದೆ.     

short by Pawan / more at Public Tv

Comments