Skip to main content


ಈ ಎಟಿಎಂನಲ್ಲಿ 500ರೂ. ಕೇಳಿದ್ರೆ, 2500 ರೂ. ಬರುತ್ತೆ !

ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಮಾಡಿದ ಎಡವಟ್ಟಿನಿಂದ ಬ್ಯಾಂಕ್‌ ಸಂಕಷ್ಟಕ್ಕೆ ಸಿಲುಕಿದೆ. ವಿಜಯನಗರದ ಭಾಗದಲ್ಲಿರುವ ಆ್ಯಕ್ಸಿಸ್‌ ಬ್ಯಾಂಕ್‌ ಎಟಿಎಂನಲ್ಲಿ ನಮೂದಿಸಿದ್ದಕ್ಕಿಂತ 5 ಪಟ್ಟು ಹೆಚ್ಚು ಹಣ ಗ್ರಾಹಕರ ಕೈ ಸೇರಿತ್ತಿತ್ತು. ಅಂದರೆ 500 ರೂ. ನಮೂದಿಸಿದರೆ, 2500 ರೂ. ಹೊರ ಬರುತ್ತಿತ್ತು. ಇದನ್ನು ಗಮನಿಸಿದ ಸಾರ್ವಜನಿಕರು ಇದೇ ಎಟಿಎಂನಿಂದ ಹಣ ಪಡೆಯಲು ಜನರ ಸಾಲು ಬೆಳೆದಿದೆ. ಎಟಿಎಂ ಎದುರು ಸಾಲುಗಟ್ಟಲೆ ಜನ ಕಂಡ ಪೊಲೀಸರು ಗಮನಿಸಿ, ವಿಚಾರಿಸಿದಾಗ, ಸತ್ಯ ಸಂಗತಿ ಬೆಳಕಿಗೆ ಬಂದಿದೆ. ಕೂಡಲೇ ಎಟಿಎಂನಿಂದ ಆಗುತ್ತಿರುವ ತಪ್ಪಿನ ಕುರಿತು ಬ್ಯಾಂಕ್‌ಗೆ ತಿಳಿಸಿ, ಎಟಿಎಂ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.    

short by Pawan / more at Vijayakarnataka

Comments